Advertisement

ಧರ್ಮ ಉಳಿಸಿ-ಬೆಳೆಸಲು ಕರೆ

01:11 PM Jun 01, 2019 | Naveen |

ಝಳಕಿ: ಧರ್ಮವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಕರೆ ನೀಡಿದರು.

Advertisement

ಅಂಜುಟಗಿ ಗ್ರಾಮದಲ್ಲಿ ವೀರಭದ್ರೇಶ್ವರ ಹಾಗೂ ಕಾಳಿಕಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಸಿಗಲಿ ಎಂದರು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಮಳೆ ಬೆಳೆ ಕಡಿಮೆಯಾಗಿ ಬರ ಬಂದರು ಕೂಡಾ ಇಲ್ಲಿಯ ರೈತರಲ್ಲಿ ಮಾತ್ರ ಗುರುಭಕ್ತಿಗೆ ಬರ ಕಂಡು ಬರಲಿಲ್ಲ ಎಂದ ಶ್ರೀಗಳು, ಶಿಕ್ಷಣದಿಂದ ಮನುಷ್ಯನ ಬುದ್ಧಿ ಬೆಳೆಯುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.

ವೀರಶೈವ ಧರ್ಮದಿಂದ ಮಾನವ ಸಂಕುಲದ ಉದ್ಧಾರವಾಗಲಿದೆ. ರಂಭಾಪುರಿ ಪೀಠದಲ್ಲಿ ಮನುಷ್ಯನ ಧರ್ಮಸಮ್ಮತವಾದ ಅನೇಕ ಕಾರ್ಯಕ್ರಮಗಳು, ಅನ್ನ ದಾಸೋಹ, ಜ್ಞಾನ ದಾಸೋಹ ಹೀಗೆ ಹಲವಾರು ಕಾರ್ಯಕ್ರಮಗಳು ಜರುಗುತ್ತವೆ. ಅದರಂತೆ ಈ ಗ್ರಾಮದಲ್ಲಿಯು ಕೂಡಾ ಧರ್ಮಸಮ್ಮತವಾದ ಕೆಲಸ ಮಾಡಿಕೊಳ್ಳಿರಿ. ಇದರಿಂದ ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿದೆ ಎಂದರು.

ಇಂಚಗೇರಿಯ ಡಾ| ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರು, ನಾದದ ಶಿವಾನಂದ ಶಿವಾಚಾರ್ಯರು, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಜಾತ್ರಾ ಕಮೀಟಿ ಅಧ್ಯಕ್ಷ ಅಣ್ಣಾರಾಯ ಬಬಲಾದ, ಸಂಬಾಜಿ ಮಿಸಾಳೆ, ಮಹಾದೇವ ಪೂಜಾರಿ, ಸುಭಾಷ್‌ ಕಲ್ಲೂರ, ರುಕ್ಮುದ್ದಿನ್‌ ತದ್ದೆವಾಡಿ, ಎಸ್‌.ಎಸ್‌. ಚನಗೊಂಡ, ರಮೇಶ ಇಕ್ಕಳಕಿ, ಎಸ್‌.ಎಲ್. ನಿಂಬರಗಿಮಠ, ನಿರಂಜನ ಹಿರೇಮಠ, ಚಂದ್ರಶೇಖರ ಪರಗೊಂಡ, ಕೆಂಪೇಗೌಡ ಪರಗೊಂಡ, ಶ್ರೀಮಂತ ಬಬಲಾದ ಇದ್ದರು.

Advertisement

ಇದಕ್ಕೂ ಮುನ್ನ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. 505 ಸುಮಂಗಲೆಯರು ಕುಂಭ ಹೊತ್ತು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next