ಹುಣಸೂರು: ಜಲಶಕ್ತಿ ಅಭಿಯಾನದಡಿ ಕೆರೆಗಳಿಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿದರೆಕೆರೆಗಳಿಗೆ ನೀರು ತುಂಬಿಸಲು ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು.
ತಾಲೂಕಿನ ಕರ್ಣಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರೀನಹಳ್ಳಿ ಕೆರೆ ಅಂಗಳದಲ್ಲಿ ಜಲಶಕ್ತಿ ಅಭಿಯಾನಕ್ಕೆ ಚಾಲನೆನೀಡಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದಅವರು, ಕೆರೆಗಳಲ್ಲಿನ ಹೂಳನ್ನುವೈಜ್ಞಾನಿಕವಾಗಿ ತೆಗೆಯಬೇಕು.ಇದರೊಟ್ಟಿಗೆ ಕೆರೆ ಏರಿಯನ್ನು ದುರಸ್ತಿಗೊಳಿಸಬೇಕು. ಮಳೆನೀರು ವ್ಯರ್ಥವಾಗದಂತೆ ಸಂಗ್ರಹಿಸಲು ಹಾಗೂ ಅಂತರ್ಜಲ ವೃದ್ಧಿಸಲು ಸಹಕಾರಿಯಾಗಲಿದೆ. ಸರ್ಕಾರದಯಾವುದೇ ಯೋಜನೆಗಳು ಸಫಲವಾಗಬೇಕಾದಲ್ಲಿ ಗ್ರಾಮಸ್ಥರ ಸಹಭಾಗಿತ್ವ ಅತಿಮುಖ್ಯವಾಗಿದೆ ಎಂದರು.
ತಾಪಂ ಇಒ ಗಿರೀಶ್ ಮಾತನಾಡಿ, ಕೇಂದ್ರ ಸರ್ಕಾರದಜಲಶಕ್ತಿ ಯೋಜನೆ ಮೂಲಕ ಮಳೆನೀರು ಸಂರಕ್ಷಣೆಗೆ ಒತ್ತುನೀಡಲಾಗಿದೆ. ಈ ಸಾಲಿನಲ್ಲಿ 118 ಕೆರೆಗಳ ಸಮಗ್ರ ಅಭಿವೃದ್ಧಿ,ಕಲ್ಯಾಣಿ, ಕಾಲುವೆಗಳ ಪುನಶ್ಚೇತನ, ಸಸಿ ನೆಡುವುದು, ಬದುನಿರ್ಮಾಣ, ಸೋಪಿಟ್ ನಿರ್ಮಾಣ ಸೇರಿದಂತೆ ಅನೇಕಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ತಹಶೀಲ್ದಾರ್ ಬಸವರಾಜ್ ಮಾತನಾಡಿ, ತಾಲೂಕಿನಕೆರೆಗಳ ಅಭಿವೃದ್ಧಿ ಸಂಬಂಧ ಸರ್ವೆ ಮಾಡಿ ಹದ್ದುಬಸ್ತು ನಿರ್ಮಿಸಿ, ಒತ್ತುವರಿ ತೆರವುಗೊಳಿಸಲಾಗುವುದೆಂದರು. ಪಿಡಿಒ ರಾಮಣ್ಣ ಮಾತನಾಡಿ, ಜಲಶಕ್ತಿ ಯೋಜನೆಯಡಿಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ 27 ಕೆರೆಗಳ ಅಭಿವೃದ್ಧಿಸೇರಿದಂತೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಈ ವೇಳೆ ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಅಧ್ಯಕ್ಷೆಪದ್ಮಮ್ಮ, ಔಟ್‌ರೀಚ್ ಸಂಸ್ಥೆಯ ಜಗದೀಶ್, ಗ್ರಾಪಂ ಅಧ್ಯಕ್ಷೆಸರಸ್ವತಿ, ಮಾಜಿ ಅಧ್ಯಕ್ಷ ಪಾಪಣ್ಣ, ಸದಸ್ಯರಾದ ಹರೀಶ್,ರವಿಕುಮಾರ್, ಮಾದೇಗೌಡ, ಸೋಮಶೇಖರ್, ಬೀರಪ್ಪ,ಮೀನಾಕ್ಷಮ್ಮ, ಸೋಮೇಶ್ವರ, ತಾಪಂ ಸ್ಥಾಯಿಸಮಿತಿ ಅಧ್ಯಕ್ಷರವಿಪ್ರಸನ್ನ, ತಾಪಂ ಸಹಾಯಕ ನಿರ್ದೇಶಕ ಲೋಕೇಶ್,ಮುಖಂಡರಾದ ರಾಜುಶಿವರಾಜು, ರಾಘು, ಮಲ್ಲೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಉದ್ಯೋಗ ಖಾತರಿಯಡಿ 70 ಕೋಟಿ ರೂ. ಬಳಕೆ :
ಈ ಸಾಲಿನ ಉದ್ಯೋಗಖಾತರಿ ಯೋಜನೆಯಡಿ ತಾಲೂಕಿನ 41 ಗ್ರಾಪಂಗಳಿಂದ 70 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವ ಜೊತೆಗೆ, ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿದೆ. ಉದೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಹುಣಸೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಜೊತೆಗೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಬಾಜನವಾಗಿರುವ ಕರ್ಣಕುಪ್ಪೆ ಗ್ರಾಪಂನಿಂದಾಗಿ ಹುಣಸೂರಿನ ಗರಿಮೆ ಹೆಚ್ಚಿದೆ ಎಂದು ಶಾಸಕ ಮಂಜುನಾಥ್ ಶ್ಲಾಘಿಸಿದರು.