ಬಂಟ್ವಾಳ: ಬಂಟ್ವಾಳ ಪೇಟೆಯಿಂದ ಆಗಮಿಸಿದ ವಾಹನಗಳು ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ಸೇರುವ ಜಕ್ರಿಬೆಟ್ಟು ಜಂಕ್ಷನ್ ಪ್ರದೇಶವು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ನಿತ್ಯವೂ ಒಂದಿಲ್ಲೊಂದು ಅಪಘಾತಗಳಿಗೆ ಕಾರಣವಾಗುತ್ತಿದೆ.
ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡ ಬಳಿಕ ಇದೇ ಜಂಕ್ಷನ್‌ನಲ್ಲಿ ಈಗಾಗಲೇ ಸುಮಾರು 25ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಕೆಲವು ದಿನಗಳ ಹಿಂದೆ ನಡೆದ ಅಪ ಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆಯೂ ನಡೆದಿದೆ. ಹೀಗಾಗಿ ಈ ಭಾಗದಲ್ಲಿ ವಾಹನ ಸವಾರರು/ಚಾಲಕರು ಎಷ್ಟೇ ಎಚ್ಚರ ವಹಿಸಿದ್ದರೂ ಅಪಘಾತದ ಸ್ಥಿತಿ ಮುಂದುವರಿದಿದೆ.
ಪ್ರಸ್ತುತ ಅಭಿವೃದ್ಧಿಗೊಂಡ ಬಳಿಕ ಹೆದ್ದಾ ರಿಯು ಮೇಲ್ಭಾಗದಲ್ಲಿದ್ದು, ಬಂಟ್ವಾಳ ಪೇಟೆಯನ್ನು ಸಂಪರ್ಕಿಸುವ ರಸ್ತೆ ಕೊಂಚ ಇಳಿಜಾರಾಗಿದೆ. ಪೇಟೆಯಿಂದ ಆಗಮಿಸಿದ ವಾಹನಗಳು ಹೆದ್ದಾರಿ ಸೇರುವ ಸಂದರ್ಭ ದಲ್ಲಿ ಗೊಂದಲ ಉಂಟಾಗುತ್ತಿದ್ದು, ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳು ನಿಯಂತ್ರಣ ಕಳೆದುಕೊಂಡು ಢಿಕ್ಕಿ ಹೊಡೆಯುವ ಸ್ಥಿತಿ ಉಂಟಾಗುತ್ತಿದೆ.
ಒಂದೆಡೆ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿದ್ದರೆ, ಪೇಟೆಯಿಂದ ಬಂದ ವಾಹನಗಳು ಹೆದ್ದಾರಿಯಲ್ಲಿ ಬರುವ ವಾಹನ ದೂರದಲ್ಲಿದೆ ಎಂದು ಏಕಾಏಕಿ ಹೆದ್ದಾರಿಯ ಕಡೆಗೆ ನುಗ್ಗಿಸುತ್ತಾರೆ. ಆದರೆ ದೂರದಲ್ಲಿದ್ದ ವಾಹನ ಏಕಾಏಕಿ ಹತ್ತಿರಕ್ಕೆ ಬಂದು ಎರಡೂ ಕಡೆಯ ವಾಹನಗಳು ಗೊಂದಲ ಕ್ಕೀಡಾಗುತ್ತಿವೆ. ಹಲವು ಸಮ ಯಗಳಿಂದ ನಿತ್ಯವೂ ವಾಹನ ಢಿಕ್ಕಿಯಾಗುವ ಘಟನೆ ಮರಕಳಿಸುತ್ತಲೇ ಇದೆ.
ಪರ್ಯಾಯ ಕ್ರಮ ಅಗತ್ಯ
ಪೇಟೆಯಿಂದ ಆಗಮಿಸಿರುವ ರಸ್ತೆ ಯಲ್ಲಿ ಹಂಪ್ಸ್ ಅನುಷ್ಠಾನಿಸಿದ್ದರೂ, ಅಪಘಾತವನ್ನು ತಪ್ಪಿಸುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸರು ಕನಿಷ್ಠ ಪಕ್ಷ ಬ್ಯಾರಿಕೇಡ್‌ಗಳನ್ನು ಇಟ್ಟಾದರೂ, ಅಪಘಾತದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಅದು ಸಾಧ್ಯವಾಗದೇ ಇದ್ದರೆ ಪರ್ಯಾಯ ಕ್ರಮವೇನು ಎಂಬುದರ ಕುರಿತು ಚಿಂತನೆ ನಡೆಸಬೇಕಿದೆ.