Advertisement

ಜಕ್ಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

10:11 AM May 14, 2019 | Team Udayavani |

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ಹೋಬಳಿಯ ಜಂಬೂರು ಗ್ರಾಮದ ಜಕ್ಕೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಂಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

Advertisement

ಕಳೆದ 2 ದಿವಸಗಳಿಂದ ಜಕ್ಕೇಶ್ವರ ದೇವಾಲಯಲ್ಲಿ ವಿಶೇಷ ಪೂಜೆ ನಡೆಯು ತ್ತಿತ್ತು, ಇಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತದ ಮೂಲಕ ಪೂಜಾ ಕೈಂಕರ್ಯಗಳು ಪ್ರಾರಂಭವಾದವು ಮೂಲ ವಿಗ್ರಹಕ್ಕೆ ಜಲಾಭಿಷೇಕ, ರುದ್ರಾ ಭಿಷೇಕ ನೆರವೇರಿಸಲಾಯಿತು ನಂತರ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿತು. ಈ ವೇಳೆ ಹಾಜರಿದ್ದ ಭಕ್ತರಿಗೆ ಮಂಗಳಾರತಿ ಪ್ರಸಾದ ನೀಡಲಾಯಿತು.

ದೇವಾಲಯದಲ್ಲಿ ಇದ್ದ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪ ಹಾಗೂ ವಸ್ತಗಳಿಂದ ಅಲಂಕಾರ ಮಾಡಿ ಅರ್ಚನೆ, ಅಘ್ಯರ್ ನೀಡುವ ಮೂಲಕ ಪೂಜೆ ಪ್ರಾರಂಭಿಸಿದ ಅರ್ಚಕರು ಅಡ್ಡಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದರು. ಈ ವೇಳೆ ಹಾಜರಿದ್ದ ಭಕ್ತರು ಮೂರ್ತಿಯನ್ನು ಉತ್ಸವಣಿಗೆಯಲ್ಲಿ ದೇವಾಲಯದಿಂದ ರಥದ ಬೀದಿಗೆ ದೇವರನ್ನು ಕರೆತಂದು ಅಲಂಕಾರ ಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಿದರು.

ನಂತರ ಗ್ರಾಮದ ಪ್ರಮುಖ ರಸ್ತೆ ಯಲ್ಲಿ ರಥವನ್ನು ಭಕ್ತರು ಎಳೆದರು, ಈ ವೇಳೆ ಭಕ್ತರು ರಥದ ಕಳಶಕ್ಕೆ ಧವನ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ರಥೋತ್ಸವದಲ್ಲಿ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಂ.ಎ. ಗೋಪಾಲಸ್ವಾಮಿ, ಶಾಸಕ ಸಿ.ಎನ್‌. ಬಾಲಕೃಷ್ಣ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಎಂ.ಎ. ರಂಗಸ್ವಾಮಿ, ಜಂಬೂರು ಗ್ರಾ ಪಂ ಸದಸ್ಯ ಶಂಕರ್‌, ಅರ್ಚಕರಾದ ಕೃಷ್ಣಮೂರ್ತಿ ದೀಕ್ಷಿತ್‌, ಮಂಜುನಾಥ ದೀಕ್ಷಿತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next