ದೇವನಹಳ್ಳಿ: ಅಮರಶಿಲ್ಪಿ ಜಕಣಾಚಾರ್ಯ ಶಿಲ್ಪಕಲೆ ಇಂದಿಗು ಜೀವಂತವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಅಮರ ಶಿಲ್ಪಿ ಜಕಣಾಚಾರ್ಯ ಸ್ಮರಣ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶಿಲ್ಪಕಲೆ ಎಲ್ಲರಿಗೂ ಒಲಿಯುವುದಿಲ್ಲ. ಒಲಿದವರು ಉತ್ತಮ ಸಾಧನೆ ಮಾಡಬೇಕು. ಶಿಲ್ಪಕಲೆ ಉಳಿಸಲುಯುವಜನಾಂಗ ಶ್ರಮಿಸಬೇಕು. ಬೇಲೂರು-ಹಳೇಬೀಡುದೇವಾಲಯಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅವರ ಕೆತ್ತನೆಮಾಡಿರುವುದನ್ನು ಪ್ರತಿಯೊಬ್ಬರಿಗೂ ತೋರಿಸಿಕೊಂಡುಬರಬೇಕು. ಅಂದಿನ ಶ್ರೇಷ್ಠವಾದ ಕಲೆಯಾಗಿದೆ. ಶಿಲ್ಪಕಲೆಗೆ ಹೆಸರು ವಾಸಿಯಾಗಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್ ಮಾತನಾಡಿ, ಜಕಣಾಚಾರಿ ಅವರ ಪ್ರತಿಯೊಂದುವಿಚಾರಗಳನ್ನು ತಿಳಿದುಕೊಳ್ಳಬೇಕು. ಮುಂದಿನಯುವಪೀಳಿಗೆಗೆ ಮಹನೀಯರ ಬಗ್ಗೆ ತಿಳಿಸಿಕೊಡಬೇಕು. ಶಿಲ್ಪಕಲೆ ಅತಿ ಎತ್ತರಕ್ಕೆ ಏರಲು ಜಕಣಾಚಾರಿ ಅವರ ಕೊಡುಗೆ ಮಹತ್ತವಾದದ್ದು ಎಂದರು.
ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದಮಂಜುನಾಥ್ ಆರಾಧ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.