ಉಡುಪಿ: ವಿಶ್ವಕರ್ಮ ಒಕ್ಕೂಟ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು, ಶಿಲ್ಪ ಪರಂಪರೆಗೆ ಗೌರವ ಸಲ್ಲಿಸಲು ವಿಶ್ವಕರ್ಮ ಮಹಾ ಸಮ್ಮೇಳನದ ಪೂರ್ವಭಾವಿಯಾಗಿ ಕುಂಜಿಬೆಟ್ಟು ಎಂಜಿಎಂ ಕ್ರೀಡಾಂಗಣದಲ್ಲಿ ಆಯೋಜಿಸ ಲಾದ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆ ಪ್ರಯುಕ್ತ ಜೋಡುಕಟ್ಟೆಯಿಂದ ಎಂಜಿಎಂ ಕಾಲೇಜು ಮೈದಾನದ ವರೆಗೆ ಶೋಭಾಯಾತ್ರೆ ಮತ್ತು ಬೃಹತ್ ಬೈಕ್, ಕಾರು ರ್ಯಾಲಿ ರವಿವಾರ ನಡೆಯಿತು.
ಸಂಸ್ಮರಣ ಸಮಿತಿ ಸಂಚಾಲಕ ಅಲೆವೂರು ಯೋಗೀಶ್ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಚೆಂಡೆ-ಮದ್ದಳೆಗಳ ವಾದನ, ವಿವಿಧ ವೇಷಭೂಷಣಗಳು, ವಿಶೇಷ ಆಕರ್ಷಣೆಯಾಗಿ ಜಕಣಾಚಾರ್ಯರ ಸ್ತಬ್ಧಚಿತ್ರ ಮೆರುಗು ನೀಡಿದೆ.
ಜೋಡುಕಟ್ಟೆಯಿಂದ ಡಯಾನ ಸರ್ಕಲ್, ಸರ್ವಿಸ್ ಬಸ್‌ನಿಲ್ದಾಣ, ಕಿದಿಯೂರು ಹೊಟೇಲ್, ಸಿಟಿ ಬಸ್ ನಿಲ್ದಾಣದಿಂದ ರಾ.ಹೆ. ಮೂಲಕ ಎಂಜಿಎಂ ಮೈದಾನದವರೆಗೆ ಸಾಗಿ ಬಂದ ಮೆರವಣಿಗೆಯಲ್ಲಿ ದ.ಕ., ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮುದಾಯದ ಎಲ್ಲ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ಸಂಘ-ಸಂಸ್ಥೆಗಳ ಮಹಿಳಾ ಮಂಡಳಿ ಅಧ್ಯಕ್ಷರು, ಸಮಾಜ
ದವರು ಭಾಗವಹಿಸಿದ್ದರು. ಶೋಭಾಯಾತ್ರೆ ಯಲ್ಲಿ ಸುಮಾರು 3 ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.