Advertisement

ಲಕ್ಷ್ಮೀನಾರಾಯಣ ಆಚಾರ್ಯರಿಗೆ ಜಕಣಾಚಾರಿ ಪ್ರಶಸ್ತಿ

10:37 AM Jul 12, 2019 | keerthan |

ಕೋಟೇಶ್ವರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2018ನೇ ಸಾಲಿನ ಶಿಲ್ಪಕಲಾ ಕ್ಷೇತ್ರದ ಜಕಣಾಚಾರಿ ಪ್ರಶಸ್ತಿಗೆ ಕೋಟೇಶ್ವರದ ಹಿರಿಯ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಪಾತ್ರರಾಗಿದ್ದಾರೆ.

Advertisement

ರಥಶಿಲ್ಪದಲ್ಲಿ ತನ್ನದೇ ಆದನ್ನು ಛಾಪನ್ನು ಬೀರಿರುವ ಲಕ್ಷ್ಮೀನಾರಾಯಣ ಆಚಾರ್ಯ ಅವರು 1982ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1990ರಲ್ಲಿ ರಾಷ್ಟ್ರ ಪ್ರಶಸ್ತಿ, 2006ರಲ್ಲಿ ಶಿಲ್ಪಗುರು ಪ್ರಶಸ್ತಿ ಪುರಸ್ಕೃತರಾಗಿದ್ದರು.

ಕೋಟೇಶ್ವರದ ನಿವಾಸಿ ದಿ| ತಲ್ಲೂರು ರಾಮಾಚಾರ್ಯ- ಜಾನಕಿ ಅವರ ಪುತ್ರ ಲಕ್ಷ್ಮೀನಾರಾಯಣ ಅವರು ಕುಲಕಸುಬನ್ನು ಮುಂದುವರಿಸಿದ್ದಲ್ಲದೆ, ರಥನಿರ್ಮಾಣದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ವಿವಿಧ ದೇಗುಲಗಳ ರಥ ನಿರ್ಮಾಣ ವಿನ್ಯಾಸದ ಬಗ್ಗೆ ತಿಳಿದು ಕೊಂಡಿದ್ದರು. ಅಗತ್ಯವಾದ ಗೃಹ ವಾಸ್ತು ದರ್ಪಣ ಅಲ್ಲದೇ ಅದಕ್ಕೆ ಪೂರಕವಾದ ಹಲವು ಗ್ರಂಥಗಳನ್ನು ಸಂಗ್ರಹಿಸಿದ್ದರು.

ರಥದ ಮಾದರಿ ಮತ್ತು ಶಿಲಕ³ಲಾ ನೈಪುಣ್ಯವನ್ನು ತೋರಿಸುವ ವಿವಿಧ ಕಲಾ ಪ್ರಕಾರಗಳ ಮಾದರಿ ರಚಿಸಿ ಕನ್ನಡ ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಕೋಟೇಶ್ವರದಲ್ಲಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ ನಿರ್ಮಿಸಿ ಅಲ್ಲೇ ಕಾರ್ಯ ನಿರತರಾಗಿದ್ದಾರೆ.

127 ರಥ ನಿರ್ಮಾಣ
ಈವರೆಗೆ 127 ರಥವನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಕುಕ್ಕೆಯ ಬೃಹತ್‌ ಬ್ರಹ್ಮರಥವೂ ಸೇರಿದೆ. ಕುಕ್ಕೆ ಕ್ಷೇತ್ರದ ಚಿನ್ನದ ರಥ ನಿರ್ಮಾಣ ಹಂತದಲ್ಲಿದೆ. ಬ್ರಹ್ಮರಥ, ಪುಷ್ಪರಥ, ಬೆಳ್ಳಿರಥ ಮತ್ತು ಚಿನ್ನದ ರಥವನ್ನು ನಿರ್ಮಿಸಿರುವ ಆಚಾರ್ಯರು ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದು ಕುಂಬಾಶಿ ಮಂಡಲಪ್ರಧಾನರಾಗಿ, ಗೋಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Advertisement

ನಾನು ಯಾವುದೇ ಪ್ರಶಸ್ತಿಗಾಗಿ ರಥ ನಿರ್ಮಿಸುತ್ತಿಲ್ಲ. ಶಿಲ್ಪಕಲಾ ಶಾಸ್ತ್ರದಲ್ಲಿ ವಿಶೇಷತೆ ಇರಬೇಕು; ರಥ ನಿರ್ಮಾಣ ಕಾರ್ಯವು ಭಕ್ತರ ಇಷ್ಟಾರ್ಥ ಪೂರೈಸುವ ಮಾದರಿಯಲ್ಲಿರಬೇಕು.
– ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next