Advertisement

ಕೈದಾಳದಲ್ಲಿ ಜಕಣಾಚಾರಿಯ 5ನೇ ಸಂಸ್ಮರಣಾ ದಿನಾಚರಣೆ

12:18 PM Jan 02, 2018 | |

ತುಮಕೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಬಜೆಟ್‌ ಅಧಿವೇಶನದಲ್ಲಿಯೇ ಹಿಂದುಳಿದ ವರ್ಗಗಳಲ್ಲಿನ 103 ಕಾಯಕ ಸಮುದಾಯಗಳ ಅಭಿವೃದ್ಧಿಗೆ  ಸಾವಿರ ಕೋಟಿ ರೂ. ತೆಗೆದಿಡಲಾಗುವುದು ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ತಾಲೂಕಿನ ಕೈದಾಳದಲ್ಲಿ ಸೋಮವಾರ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಏರ್ಪಡಿಸಲಾಗಿದ್ದ 5 ನೇ ರಾಜ್ಯಮಟ್ಟದ ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಹಿಂದುಳಿದ ಜನಾಂಗಗಳಿಗೆ ಶಕ್ತಿ ನೀಡಬೇಕು.

ಈ ನಿಟ್ಟಿನಲ್ಲಿ ಈ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಕಾಯಕ ಸಮುದಾಯಗಳನ್ನು ಸಂಘಟಿಸಿ ಸರ್ಕಾರದಿಂದ ಅವರಿಗೆ ಸಿಗಬೇಕಾಗಿರುವ ಸವಲತ್ತುಗಳನ್ನು ಕೊಡಿಸುವ ಜವಾಬ್ದಾರಿ ಕೆ.ಪಿ.ನಂಜುಂಡಿ ಮೇಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೆ.ಪಿ.ನಂಜುಂಡಿಯವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುತ್ತೇನೆ.

ಜ.1ರಂದು ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಮಾರಣಾ ದಿನಾಚರಣೆಯನ್ನು ಸರ್ಕಾರದಿಂದಲೇ ಆಚರಿಸಲು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಘೋಷಿಸಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಕಾಳಹಸ್ತೇಂದ್ರ ಸ್ವಾಮಿ, ಭೋವಿ ಸಮಾಜದ ಸಿದ್ದರಾಮೇಶ್ವರಮಾಹ ಸ್ವಾಮಿ, ಮಡಿವಾಳ ಸಮುದಾಯದ ಬಸವ ಮಾಚಿದೇವ ಸ್ವಾಮಿ,

ಛಲವಾದಿ ಸಮುದಾಯದ ಬಸವನಾಗಿದೇವ ಮಹಾಸ್ವಾಮಿ, ರೆಡ್ಡಿ ಸಮುದಾಯದ ಬಸವರಾಜ ಮಹಾಸ್ವಾಮಿ, ದೊಂಬಿದಾಸರ ಸಮಾಜದ ರಾಜಯೋಗಿ ವಿದ್ವಾನ್‌ ಕರುಣಾಕರ ಮಹಾಸ್ವಾಮಿ, ತಿಗಳ ಸಮುದಾಯದ ಜ್ಞಾನಾನಂದ ಪುರಿ ಮಹಾಸ್ವಾಮಿ, ಕುಂಚಿಟಿಗ ಸಮಾಜದ ಶಾಂತವೀರ  ಮಹಾಸ್ವಾಮಿ ಸೇರಿದಂತೆ ಹಿಂದುಳಿದ ವರ್ಗಗಳ ಹಲವಾರು ಮಠಗಳ ಸ್ವಾಮೀಜಿಗಳು ವಹಿಸಿದ್ದರು.

Advertisement

ಸಿದ್ಧಗಂಗಾಶ್ರೀಗೆ ಭಾರತ ರತ್ನಕ್ಕೆ ಮನವಿ: ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಬಿಎಸ್‌ವೈ, ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡುವಂತೆ ಕೇಂದ್ರ ಸಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next