Advertisement
ವಿಪರೀತ ಮಳೆಯಿಂದಾಗಿ ಗಿಡಗಳು ಹಾಳಾಗಿ ಬೇಡಿಕೆಗನುಗುಣವಾಗಿ ಮಲ್ಲಿಗೆ ಮಾರುಕಟ್ಟೆಗೆ ಬರುತ್ತಿಲ್ಲ. ಇದೇ ವೇಳೆ ಜತೆಗೆ ಹಬ್ಬದ ಸಂದರ್ಭ ಬೇಡಿಕೆಯೂ ಇರುವುದರಿಂದ ನವರಾತ್ರಿಯಿಡೀ 1,250 ರೂ. ಮುಂದುವರಿದರೆ ಅದೂ ಒಂದು ದಾಖಲೆಯಾಗಲಿದೆ.
ಮಳೆಯಿಂದ ಇಳುವರಿ ಕುಂಠಿತಗೊಂಡು ಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿ ಜಾಜಿಯ ದರವೂ ಏರಿದೆ. ಮಲ್ಲಿಗೆ ಬೆಳೆ ಕಡಿಮೆಯಾಗಿರುವುದರಿಂದ ಬೆಳೆಗಾರರಿಗೆ ಯಾವುದೇ ಖರ್ಚಿಲ್ಲದೆ ಬೆಳೆಯುವ ಜಾಜಿಗೆ ಬಂಪರ್ ಬೆಲೆ ಬಂದಿದೆ. ಕಳೆದ ವಾರದಲ್ಲಿ 300-400 ರೂ. ಆಸುಪಾಸಿನಲ್ಲಿದ್ದ ಜಾಜಿದರ ಅ. 16ರಂದು ರೂ. 850 ಇದ್ದು ಶನಿವಾರ 1,050 ರೂ. ತಲುಪಿದೆ. ಕಳೆದ ವಾರದ ವರೆಗೆ ನಿರಂತರ ಮಳೆಬಂದು ಗಿಡಗಳು ಹಾಳಾಗಿ ಮಲ್ಲಿಗೆ ಹೂವಿನ ಅಭಾವದಿಂದಾಗಿ ಜಾಜಿಯೂ ಉತ್ತಮ ದರ ಕಾಯ್ದುಕೊಂಡಿದೆ. ಮಾರುಕಟ್ಟೆಯಲ್ಲಿ ಶನಿವಾರ
ಕಟ್ಟೆ (ಬೆಳೆಗಾರರಿಂದ ಸಂಗ್ರಹಿಸಿ ವಿಲೇವಾರಿ ಮಾಡುವ ಸ್ಥಳ)ಯಲ್ಲಿ ಮಲ್ಲಿಗೆಗೆ ಗರಿಷ್ಠ ದರ ನಿಗದಿಯಾಗಿದ್ದರೂ ಮಾರುಕಟ್ಟೆಯಲ್ಲಿ ವಿಭಿನ್ನ ದರ ಇರುತ್ತದೆ. ಬೇಡಿಕೆಗನುಗುಣವಾಗಿ ಮತ್ತು ಊರಿನಿಂದ ಊರಿಗೆ ಈ ದರದಲ್ಲಿ
ವ್ಯತ್ಯಾಸ ಇರುತ್ತದೆ.