Advertisement

ಸತ್ಯಕ್ಕೆ 2 ಮುಖಗಳಿಲ್ಲ;ಹೊಲಾಂದೆ ಆರೋಪಕ್ಕೆ ಜೇಟ್ಲಿ ತಿರುಗೇಟು 

12:43 PM Sep 23, 2018 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ ಕುರಿತಂತೆ ಮೋದಿ ಸರ್ಕಾರ, ಕೇವಲ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನು ಮಾತ್ರ ಆಯ್ಕೆಯಾಗಿ ನೀಡಿತ್ತು ಎಂದು ಗಂಭೀರ ಆರೋಪ ಮಾಡಿರುವ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾನ್ಕೋಯಿಸ್‌ ಹೊಲಾಂದೆ ಅವರಿಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ದಿಟ್ಟ ತಿರುಗೇಟು ನೀಡಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಹೊಲಾಂದೆ ಅವರ ವಿರುದ್ಧ ಕಿಡಿ ಕಾರಿ ಸತ್ಯಕ್ಕೆ ಯಾವತ್ತೂ ಎರಡು ಮುಖಗಳಿರುವುದಿಲ್ಲ ಎಂದು ಜೇಟ್ಲಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ಎಎನ್‌ಐನೊಂದಿಗೆ ಮಾತನಾಡಿದ ಸಚಿವ ಜೇಟ್ಲಿ ಕಾಂಗ್ರೆಸ್‌ ಪಕ್ಷ ಯಾವುದನ್ನೂ ನಂಬಬಹುದು. ಆದರೆ ನಡವಳಿಕೆಯ ಮೂಲಭೂತ ತತ್ವವನ್ನು  ನೆನಪಿನಲ್ಲಿಟ್ಟುಕೊಳ್ಳಬೇಕು. ಜಗತ್ತನ್ನು ಶತಮಾನಗಳವರೆಗೆ ಆಳಲಾಗಿದೆ. ಕರಾರುವಾಕ್‌ ಆಗಿ ಸತ್ಯ ಹೇಳಬಹುದು, ಪರಿಸ್ಥಿತಿ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಕಾಂಗ್ರೆಸ್‌ ವಿರುದ್ದ ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next