ಮುಂಬೈ: ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ಸದ್ಯ ಐಪಿಎಲ್ ನಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಶಾಸ್ತ್ರಿ, ರಾಜಸ್ಥಾನ ರಾಯಲ್ಸ್ ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಯಶಸ್ವಿ ಜೈಸ್ವಾಲ್ 2023 ಐಪಿಎಲ್ ನಲ್ಲಿ ಇದುವರೆಗೆ 12 ಪಂದ್ಯಗಳಿಂದ 575 ರನ್ ಗಳಿಸಿದ್ದಾರೆ. ಅಗ್ರ ರನ್ ಸ್ಕೋರರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್‌ಗಿಂತ ಕೇವಲ 2 ರನ್ ಹಿಂದೆ ಇದ್ದಾರೆ. ಜೈಸ್ವಾಲ್ ಅವರು ಈ ಬಾರಿ ಲೀಗ್ ನಲ್ಲಿ ಒಂದು ಶತಕವನ್ನು ಬಾರಿಸಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಜೇಯ 98 ರನ್ ಗಳಿಸಿದ್ದಾರೆ. ಇದೇ ವೇಳೆ ಐಪಿಎಲ್ ಇತಿಹಾಸದ ಅತೀ ವೇಗದ ಅರ್ಧಶತಕವನ್ನೂ ಬಾರಿಸಿದ್ದರು.
ಜೈಸ್ವಾಲ್ ಬಗ್ಗೆ ಮಾತನಾಡಿರುವ ಶಾಸ್ತ್ರಿ, ಆಯ್ಕೆಗಾರರು ಜೈಸ್ವಾಲ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಶೀಘ್ರದಲ್ಲೇ ಜೈಸ್ವಾಲ್ ಭಾರತಕ್ಕಾಗಿ ಆಡಲಿದ್ದಾರೆ. ಅವನಲ್ಲಿರುವ ಅತ್ಯುತ್ತಮ ವಿಷಯವೆಂದರೆ ಅವನು ತನ್ನ ಗ್ರಾಫ್ ಅನ್ನು ಹೆಚ್ಚಿಸಿದ ರೀತಿ. ಅವನ ಆಟದಲ್ಲಿ ಶಕ್ತಿಯಿದೆ, ಸಮಯವಿದೆ. ಅವರು ಉಜ್ವಲ ಭವಿಷ್ಯದ ನಿರೀಕ್ಷೆಗಳನ್ನು ಹೊಂದಿದ್ದಾರೆ” ಎಂದರು.
ರವಿವಾರ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ.