Advertisement

‘ಉಗ್ರವಾದ’ಮನುಕುಲಕ್ಕೆ ಗಂಭೀರ ಬೆದರಿಕೆ: ಜೈಶಂಕರ್‌

09:44 PM Feb 23, 2021 | Team Udayavani |

ಜಿನೇವಾ/ ಪೋರ್ಟ್‌ ಲೂಯೀಸ್‌: ಭಯೋತ್ಪಾದನೆ ಮನುಕುಲದ ಪಾಲಿಗೆ ಗಂಭೀರ ಬೆದರಿಕೆ. ಉಗ್ರವಾದ ಸಮರ್ಥನೆಗೆ ಅನರ್ಹ ಎಂಬ ಸತ್ಯವನ್ನು ಮಾನವಹಕ್ಕು ಪ್ರತಿಪಾದಿಸುವವರು ಅರಿತುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಬುದ್ಧಿಮಾತು ಹೇಳಿದ್ದಾರೆ.

Advertisement

ಮಾನವ ಹಕ್ಕುಗಳ ಮಂಡಳಿಯ 46ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವ, “ಉಗ್ರವಾದ ಮನುಷ್ಯತ್ವದ ವಿರುದ್ಧದ ಮಹಾನ್‌ ಅಪರಾಧ. ಜೀವಿಸುವ ಹಕ್ಕನ್ನೇ ಇದು ಉಲ್ಲಂಘಿಸುತ್ತದೆ. ಉಗ್ರವಾದ ಕಿತ್ತೂಗೆಯುವ ಸಂಬಂಧ ಜಾಗತಿಕ ಹೋರಾಟಕ್ಕೆ ಭಾರತ ಸದಾ ಮುಂಚೂಣಿಯಲ್ಲಿ ನಿಂತು ಬೆಂಬಲಿಸಿದೆ. ಈ ವಿಚಾರದಲ್ಲಿ ಭದ್ರತಾ ಮಂಡಳಿಗೆ ಮುಂದೆಯೂ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ಭವನ ಉದ್ಘಾಟನೆ: ಕಡಲವ್ಯಾಪ್ತಿಯ ಭಾರತದ ಮಿತ್ರರಾಷ್ಟ್ರ ಮಾರಿಷಸ್‌ನಲ್ಲಿ ಭಾರತೀಯ ಹೈಕಮಿಷನ್‌ನ 950 ವಸತಿ ಘಟಕಗಳನ್ನೊಳಗೊಂಡ ನೂತನ ರಾಜತಾಂತ್ರಿಕ ಭವನವನ್ನು ಎಸ್‌. ಜೈಶಂಕರ್‌ ದ್ವೀಪರಾಷ್ಟ್ರದ ಪ್ರವಾಸದ ವೇಳೆ ಉದ್ಘಾಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next