Advertisement

ಭಾರತದ ನೂತನ ವಿದೇಶ ಸಚಿವರಾಗಿ ಜೈಶಂಕರ್‌: ಅಮೆರಿಕ ಪರಿಣತರ ಪ್ರಶಂಸೆ

09:58 AM Jun 09, 2019 | Sathish malya |

ವಾಷಿಂಗ್ಟನ್‌ : ವಿಶ್ವದ ಅತ್ಯುತ್ತಮ ರಾಜತಂತ್ರಜ್ಞರಲ್ಲಿ ಒಬ್ಬರೆಂದು ಸರ್ವತ್ರ ಪರಿಗಣಿತರಾಗಿರುವ ಎಸ್‌ ಜೈಶಂಕರ್‌ ಅವರು ಭಾರತದ ಹೊಸ ವಿದೇಶ ವ್ಯವಹಾರಗಳ ಸಚಿವರಾಗಿ ನೇಮಕಗೊಂಡಿರುವುದು ಒಂದು ಅತ್ಯುತ್ತಮ ಆಯ್ಕೆ ಎಂದು ಅಮೆರಿಕದ ಹಲವು ರಾಜತಂತ್ರಜ್ಞರು ಮತ್ತು ವಿದೇಶ ನೀತಿ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಅವರು ಜೈಶಂಕರ್‌ ನೇಮಕಾತಿಯನ್ನು ಸ್ವಾಗತಿಸಿದ್ದಾರೆ.

Advertisement

ಜೈಶಂಕರ್‌ ಅವರ ಕಾರ್ಯ ನಿರ್ವಹಣೆಯಲ್ಲಿ ಅಮೆರಿಕ -ಭಾರತ ವ್ಯೂಹಾತ್ಮಕ ಸಂಬಂಧಗಳು ಇನ್ನಷ್ಟು ಬಲಗೊಂಡು ಹೊಸ ಕ್ಷಿತಿಜ ಕಾಣುವುದೆಂಬ ವಿಶ್ವಾಸವನ್ನು ಅಮೆರಿಕದ ಈ ಪರಿಣತರು ವ್ಯಕ್ತಪಡಿಸಿದ್ದಾರೆ.

2013-15ರ ಅವಧಿಯಲ್ಲಿ ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದ 64ರ ಹರೆಯದ ಜೈಶಂಕರ್‌ ಅವರು ತಮ್ಮ ರಾಜತಾಂತ್ರಿಕ ಕೌಶಲ, ಅತ್ಯಂತ ಕಠಿನ ಚೌಕಾಶಿ ತಂತ್ರ ಮತ್ತು ವ್ಯೂಹಾತ್ಮಕ ಮುನ್ನೋಟಗಳಿಂದ ಅದ್ಭುತ ಯಶಸ್ಸು ಸಾಧಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next