Advertisement

Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು

02:41 PM May 02, 2024 | Team Udayavani |

ವಾಷಿಂಗ್ಟನ್: ಪಂಜಾಬಿ ಗಾಯಕ ಸಿಧು ಮೊಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ರೂವಾರಿಯಾಗಿದ್ದ ಗೋಲ್ಡಿ ಬ್ರಾರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿಗೆ ಇದೀಗ ಅಮೆರಿಕ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.

Advertisement

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹವರ್ತಿ ಗೋಲ್ಡಿ ಬ್ರಾರ್‌ನನ್ನು ಯುಎಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗಳು ಹರಡಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು ಮಂಗಳವಾರ ಕ್ಯಾಲಿಫೋರ್ನಿಯಾದ ಫ್ರೆಸ್ನೊದಲ್ಲಿನ ಫೇರ್ಮಾಂಟ್ ಮತ್ತು ಹಾಲ್ಟ್ ಅವೆನ್ಯೂದಲ್ಲಿ ನಡೆದ ಶೂಟೌಟ್ ನಲ್ಲಿ ಇಬ್ಬರು ಮೃತಪಟ್ಟಿದ್ದು ಅದರಲ್ಲಿ ಓರ್ವ ಗೋಲ್ಡಿ ಬ್ರಾರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಡಿತ್ತು ಆದರೆ ಈ ಸುದ್ದಿ ಸುಳ್ಳು ಸುದ್ದಿಯಾಗಿದ್ದು ನಿಜವಾಗಿ ಈ ಶೂಟೌಟ್ ನಲ್ಲಿ ಮೃತಪಟ್ಟವರ ಫೋಟೋ ಮತ್ತು ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ ಇವರೇ ಮೃತಪಟ್ಟವರು ಅದರ ಬದಲಾಗಿ ಗೋಲ್ಡಿ ಬ್ರಾರ್ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next