Advertisement

ಬಾಲಾಕೋಟ್‌ನಲ್ಲಿ ಮತ್ತೆ ಜೈಶ್‌ ಕಾರ್ಖಾನೆ: ಕೇಂದ್ರ ಗುಪ್ತಚರ ಸಂಸ್ಥೆ ಮುನ್ನೆಚ್ಚರಿಕೆ

12:28 AM Feb 16, 2020 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ಜೈಶ್‌- ಎ- ಮೊಹಮ್ಮದ್‌ನ ಎರಡು ಹೊಸ ಉಗ್ರ ತರಬೇತಿ ಕೇಂದ್ರಗಳು ಚಿಗಿತುಕೊಳ್ಳುತ್ತಿವೆ ಎಂಬುದಾಗಿ ವರದಿಯಾಗಿದೆ. ಕಳೆದ ವರ್ಷದ ಪುಲ್ವಾಮಾ ಘಟನೆಯ ಬಳಿಕ ಭಾರತವು ವೈಮಾನಿಕ ದಾಳಿ ನಡೆಸಿ ಅಲ್ಲಿದ್ದ ಕೇಂದ್ರಗಳನ್ನು ನಾಶಪಡಿಸಿತ್ತು. ಹೊಸ ಕೇಂದ್ರಗಳಿಗೆ ಉಗ್ರ ಯೂಸುಫ್ ಅಝರ್‌ ಮುಖ್ಯಸ್ಥನಾಗಿದ್ದು, ಅಲ್ಲಿ ಭಯೋತ್ಪಾದಕರಿಗೆ ಸರ್ವ ರೀತಿಯ ವಿಧ್ವಂಸಕ ಕೃತ್ಯಗಳಿಗೆ ತರಬೇತಿ ನೀಡಲಾಗುತ್ತಿದೆ.

Advertisement

ಕೇಂದ್ರ ಗುಪ್ತಚರ ಸಂಸ್ಥೆಗಳು ಈ ಅಂಶವನ್ನು ಖಚಿತ ಪಡಿಸಿವೆ. ತಾಂತ್ರಿಕ ಮತ್ತು ಇತರ ಮೂಲಗಳು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಗಳ ಪ್ರಕಾರ ಬಾಲಾ ಕೋಟ್‌ನಲ್ಲಿ ಎರಡು ಹೊಸ ತರಬೇತಿ ಕೇಂದ್ರಗಳು ನಿರ್ಮಾಣಗೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಮತ್ತಷ್ಟು ತರಬೇತಿ ಕಾರ್ಯ ಆರಂಭವಾಗಲಿದೆ. ಸದ್ಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಜ| ಬಿಪಿನ್‌ ರಾವತ್‌ ಅವರು 2019ರ ಸೆಪ್ಟಂಬರ್‌ನಲ್ಲಿಯೇ ಜೈಶ್‌ ಮತ್ತೆ ತರಬೇತಿ ಕೇಂದ್ರಗಳನ್ನು ಶುರು ಮಾಡಿದೆ ಎಂದಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದ ದಿನ (2019ರ ಆ.5)ದಿಂದ ಪಾಕಿಸ್ಥಾನವು ಭಾರೀ ಪ್ರಮಾಣದಲ್ಲಿ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ದೊಳಕ್ಕೆ ನುಗ್ಗಿಸಲು ಪ್ರಯತ್ನ ಮಾಡುತ್ತಿದೆ. ಹಿಮಪಾತ ಉಂಟಾಗುತ್ತಿದ್ದರೂ ಅದು  ತನ್ನ ದುಸ್ಸಾಹಸ ಮುಂದು ವರಿಸಿದೆ ಎಂದು ಗುಪ್ತಚರ ವಿಭಾಗದ ಮತ್ತೂಬ್ಬ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಜ.30ರಂದು ಮೂವರು ಭಯೋತ್ಪಾದಕರು ಒಳ ನುಸುಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಅವರನ್ನು ಕೊಲ್ಲಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ಬೇಸಗೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯಗಳು ಹೆಚ್ಚುವ ಸಾಧ್ಯತೆಯಿದೆ ಎಂದೂ ಗುಪ್ತಚರ ಸಂಸ್ಥೆಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next