Advertisement
ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನಪಂದ್ಯದುದ್ದಕ್ಕೂ ಜೈಪುರ್ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿತು. ಎಂದಿನಂತೆ ಈ ಸಲವೂ ತಾರಾ ರೈಡರ್ ದೀಪಕ್ ಹೂಡಾ (10 ಅಂಕ) ಭರ್ಜರಿ ದಾಳಿ ಮಾಡುವ ಮೂಲಕ ಪುನೇರಿ ಪಲ್ಟಾನ್ ತಂತ್ರವನ್ನೆಲ್ಲ ಬುಡಮೇಲಾಗಿಸಿದರು. 9 ಅಂಕವನ್ನು ರೈಡಿಂಗ್‌ನಿಂದ ಪಡೆದ ದೀಪಕ್, ಒಂದು ಆಕರ್ಷಕ ಟ್ಯಾಕಲ್ ಕೂಡ ನಡೆಸಿ ಗಮನ ಸೆಳೆದರು. ಇವರಿಗೆ ತಂಡದ ಸಹ ಆಟಗಾರರಾದ ವಿಶಾಲ್ (4 ಅಂಕ), ನಿತಿನ್ ರಾವಲ್ (4 ಅಂಕ), ಸಂದೀಪ್ ದುಲ್ (4 ಅಂಕ) ಸೇರಿದಂತೆ ಎಲ್ಲ ಆಟಗಾರರೂ ಸಾಥ್ ನೀಡಿದರು.
ಪುನೇರಿ ಮತ್ತೂಮ್ಮೆ ಕಳಪೆ ಪ್ರದರ್ಶನ ನೀಡಿತು. ಭರವಸೆಯ ಮಂಜಿತ್ (5 ಅಂಕ), ನಿತಿನ್ ತೋಮರ್ (3 ಅಂಕ) ಕೂಡ ವಿಫಲರಾದ್ದರಿಂದ ತಂಡ ಪುನಃ ಮುಗ್ಗರಿಸಿತು.