Advertisement

Jaipur: 20 ಮಹಿಳೆಯರ ಗ್ಯಾಂಗ್‌ರೇಪ್‌: ಪುರಸಭೆಯ ಇಬ್ಬರ ವಿರುದ್ಧ ಪ್ರಕರಣ

12:39 AM Feb 12, 2024 | Team Udayavani |

ಜೈಪುರ: ಅಂಗನವಾಡಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ರಾಜಸ್ಥಾನದ ಶಿರೋಹಿ ಪುರಸಭೆ ಅಧ್ಯಕ್ಷ ಮಹೇಂದ್ರಾ ಮೇವಾಡ, ಮಾಜಿ ಆಯುಕ್ತ ಮಹೇಂದ್ರ ಚೌಧರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮ್ಮನ್ನೂ ಸೇರಿ 20 ಮಹಿಳೆಯರು ಅಂಗನವಾಡಿ ಕೆಲಸಕ್ಕಾಗಿ ಶಿರೋಹಿಗೆ ತೆರಳಿದ್ದೆವು.

Advertisement

ಅಲ್ಲಿ ಮೇವಾಡ ಮತ್ತು ಚೌಧರಿ, ಊಟದಲ್ಲಿ ನಿದ್ದೆ ಬರಿಸುವ ಔಷಧ ಬೆರೆಸಿ, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅಲ್ಲದೇ ಕೃತ್ಯದ ವೀಡಿಯೋ ಮಾಡಿ, ಮಹಿಳೆಯರಿಂದ ತಲಾ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದೂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next