ನವದೆಹಲಿ: ಪ್ರತಿಷ್ಠಿತ ಜೈಪ್ರಕಾಶ್ ಅಸೋಸಿಯೇಟ್ಸ್ ತನ್ನ ಒಡೆತನದ ಸಿಮೆಂಟ್, ಕ್ಲಿಂಕರ್ (ಸಿಮೆಂಟ್ ಇಟ್ಟಿಗೆ ಉತ್ಪಾದನೆ) ಮತ್ತು ವಿದ್ಯುತ್ ಪ್ಲ್ಯಾಂಟ್ ಗಳನ್ನು ದಾಲ್ಮಿಯಾ ಸಿಮೆಂಟ್ (ಭಾರತ್) ಗ್ರೂಪ್ ಗೆ ಬರೋಬ್ಬರಿ 5,666 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಜೈಪ್ರಕಾಶ್ ಅಸೋಸಿಯೇಟ್ಸ್ ಕಂಪನಿ ಷೇರುಮಾರುಕಟ್ಟೆಗೆ ತಿಳಿಸಿದೆ.
ಇದನ್ನೂ ಓದಿ:ಗಡಿ ವಿಚಾರವಾಗಿ ನಮ್ಮ ನಿಲುವನ್ನು ಕೇಂದ್ರದ ಮುಂದೆ ತಿಳಿಸುತ್ತೇವೆ: ಸಿಎಂ ಬೊಮ್ಮಾಯಿ
ದೇಶದ ಹೆಸರಾಂತ ದಾಲ್ಮಿಯಾ ಗ್ರೂಪ್ ಗೆ ತನ್ನ ವಹಿವಾಟನ್ನು ಮಾರಾಟ ಮಾಡುವ ಮೂಲಕ ಜೈಪ್ರಕಾಶ್ ಅಸೋಸಿಯೇಟ್ಸ್ ಸಿಮೆಂಟ್ ವ್ಯವಹಾರಿಂದ ಹೊರ ಬಂದಂತಾಗಿದೆ ಎಂದು ವರದಿ ವಿವರಿಸಿದೆ.
ಜೈಪ್ರಕಾಶ್ ಅಸೋಸಿಯೇಟ್ಸ್ ಸಿಮೆಂಟ್, ಕ್ಲಿಂಕರ್, ವಿದ್ಯುತ್ ಸ್ಥಾವರಗಳನ್ನು ಮಾರಾಟ ಮಾಡುವ ಮೂಲಕ ದಾಲ್ಮಿಯಾ ಸಿಮೆಂಟ್ ಉತ್ಪಾದನೆಯ ಸಾಮರ್ಥ್ಯ 9.4 ಮಿಲಿಯನ್ ಮೆಟ್ರಿಕ್ ಟನ್ ಗೆ ಏರಿಕೆಯಾದಂತಾಗಿದೆ. ಅದೇ ರೀತಿ ಕ್ಲಿಂಕರ್ ಉತ್ಪಾದನೆ ಸಾಮರ್ಥ್ಯ ಕೂಡಾ 6.7 ಮೆಟ್ರಿಕ್ ಟನ್ ಗೆ ಏರಿಕೆಯಾಗಿದೆ. ಧರ್ಮಲ್ ಪವರ್ ಸಾಮರ್ಥ್ಯ 280 ಮೆಗಾ ವ್ಯಾಟ್ ತಲುಪಿದೆ ಎಂದು ವರದಿ ವಿವರಿಸಿದೆ.
ದಾಲ್ಮಿಯಾ ಕಂಪನಿಯ ದೇಶೀಯ ಸಿಮೆಂಟ್ ಉತ್ಪಾದನೆ ವಾರ್ಷಿಕವಾಗಿ 37 ಮೆಟ್ರಿಕ್ ಟನ್ ನಿಂದ 47 ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದೆ. 2024ರ ಸಾಲಿನಲ್ಲಿ ವಾರ್ಷಿಕವಾಗಿ 60 ಮೆಟ್ರಿಕ್ ಟನ್ ತಲುಪಲಿದೆ ಎಂದು ತಿಳಿಸಿದೆ.
ಆಲ್ಟ್ರಾ ಟೆಕ್ ಭಾರತದ ಅತೀ ದೊಡ್ಡ ಸಿಮೆಂಟ್ ಉತ್ಪಾದಕ ಕಂಪನಿಯಾಗಿದ್ದು, ಅದಾನಿ ಒಡೆತನದ ಅಂಬುಜಾ-ಎಸಿಸಿ ಎರಡನೇ ಸ್ಥಾನದಲ್ಲಿದ್ದು, ದಾಲ್ಮಿಯಾ ಸಿಮೆಂಟ್ ಮೂರನೇ ಸ್ಥಾನದಲ್ಲಿರುವುದಾಗಿ ವರದಿ ಹೇಳಿದೆ.