Advertisement

ಮಲೆನಾಡು ಭಾಗದ ಒಕ್ಕಲಿಗರು ಜೈನರಾಗಿದ್ದರು: ಸಚಿವ ಆರಗ ಜ್ಞಾನೇಂದ್ರ

12:49 AM Apr 16, 2022 | Team Udayavani |

ಬೆಂಗಳೂರು: ಮಲೆನಾಡು ಭಾಗದ ಒಕ್ಕಲಿಗರು ಒಂದು ಕಾಲದಲ್ಲಿ ಜೈನರಾಗಿದ್ದರು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ಹಮ್ಮಿಕೊಂಡಿದ್ದ 35ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಮುನಿರಾಜ ರೆಂಜಾಳ ಅವರಿಗೆ ಈ ಸಾಲಿನ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಈಗಲೂ ಕೂಡ ಕೆಲವು ಜೈನ ಸಂಪ್ರದಾಯ ಕಾಣಬಹುದಾಗಿದೆ.

ಯಾವುದೇ ಹಬ್ಬಗಳು ಇರಲಿ, ಅಲ್ಲಿ ಹಿರಿಯರಿಗೆ ಎಡೆ ಹಾಕುವಾಗ ಜೈನ ಎಡೆ ಹಾಕುವ ಪದ್ಧತಿ ನಮ್ಮಲ್ಲಿ ಈಗಲೂ ಇದೆ. ಕಾಲದ ಹೊಡೆತಕ್ಕೆ ಸಿಲುಕಿ ಈಗ ಅವರು ಒಕ್ಕಲಿಗರಾಗಿರಬಹುದು. ಕಾಲ ಬದಲಾದಂತೆ ಸಂಪ್ರದಾಯ ಮತ್ತು ಆಚರಣೆಗಳು ಕೂಡ ಬದಲಾವಣೆ ಆಗುತ್ತಲೇ ಇರುತ್ತವೆ. ನನ್ನನ್ನು ಕೆಲವರು ಈಗಲೂ ಜೈನರು ಎಂದೇ ಭಾವಿಸಿದ್ದಾರೆ ಎಂದರು.

ನರಸಿಂಹರಾಜಪುರ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ, ದ.ಕ. ಜೈನ ಮೈತ್ರಿಕೂಟ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷ ಡಿ. ಸುರೇಂದ್ರ, ಸಂಸ್ಥಾಪಕ ಕಾರ್ಯದರ್ಶಿ ಕೆ.ಬಿ. ಯುವರಾಜ ಬಲ್ಲಾಳ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next