Advertisement

ಸಾಮೂಹಿಕ ಕ್ಷಮಾವಳಿ ನಡೆಸಿಕೊಟ್ಟ ಜೈನಮುನಿಗಳು

11:53 AM Sep 11, 2017 | |

ಬೆಂಗಳೂರು: ಕ್ಷಮೆ ಸುಲಭದ ಸೊತ್ತಲ್ಲ. ಅತ್ಯಂತ ಕಠಿಣವಾದ ವಿಷಯ. ಮನಶುದ್ಧಿಯಿಂದ ಕ್ಷಮಾವಳಿ ನಡೆಸಬೇಕು ಎಂದು ಪುಷ್ಪಗಿರಿ ಪ್ರಣೀತ ವಾತ್ಸಲ್ಯ ದಿವಾಕರ ಆಚಾರ್ಯ  ಪುಷ್ಪದಂತ ಸಾಗರಜೀ ಹೇಳಿದರು. ಕರ್ನಾಟಕ ಜೈನ ಸಂಘ ಮತ್ತು ತ್ಯಾಗಿ ಸೇವಾ ಸಮಿತಿ ಟ್ರಸ್ಟ್‌ನಿಂದ ಭಾನುವಾರ ನಗರದ ಜೈನ ಭವನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

Advertisement

ಕ್ಷಮೆಯ ವಿವಿಧ ಆಯಾಮಗಳನ್ನು ವಿವರಿಸಿದ ಶ್ರೀಗಳು, ಪ್ರತಿ ಮನುಷ್ಯನಿಗೂ ಧರ್ಮದ ಮೇಲಿನ ಶ್ರದ್ಧೆ ಅಗತ್ಯ. ಯಾರೇ ಆಗಲೀ ಇನ್ನೊಬ್ಬರಿಗೆ ಕ್ಷಮೆ ನೀಡುವಾಗ ಹೃದಯದಿಂದ ಅಥವಾ ಹೃದಯ ಶ್ರೀಮಂತಿಕೆಯಿಂದ ನೀಡಬೇಕು. ವಿರೋಧಿಗಳನ್ನು ಶುದ್ಧ ಮನಸ್ಸಿನಿಂದ ಕ್ಷಮಿಸುವ ಪರಿಶುದ್ಧತೆ ನಮ್ಮಲ್ಲಿ ಇರಬೇಕು. ಮಾನವ ಸಹಜ ಸ್ವಭಾವವಾಗಿರುವ ಕ್ಷಮೆ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಹೇಗೆ ವ್ಯಕ್ತಪಡಿಸುತ್ತೇವೆ ಎಂಬುದು ಮುಖ್ಯ ಎಂದರು.

ಪ್ರಮುಖಸಾಗರ ಮಹಾರಾಜರು, ಸಾಗರ ಮಹಾರಾಜರು, ರಾಷ್ಟ್ರಸಂತ ಲಲಿತಪ್ರಭ ಸಾಗರ ಮಹಾರಾಜರು, ಚಂದ್ರಪ್ರಭ ಸಾಗರ ಮಹಾರಾಜರು, ಡಾ.ಶಾಂತಿಪ್ರಿಯಾ ಸಾಗರ ಮಹಾರಾಜರು ಮತ್ತು ಪುಕಾರ ಸಾಗರ ಮಹಾರಾಜರು ಕ್ಷಮಾವಳಿಯ ಬಗ್ಗೆ ಉಪನ್ಯಾಸ ನೀಡಿ, ಸಾಮೂಹಿಕ ಕ್ಷಮಾವಳಿ ನಡೆಸಿಕೊಟ್ಟರು.

ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಸಮಾಜರತ್ನ ಧರ್ಮಸ್ಥಳದ ಸುರೇಂದ್ರ ಕುಮಾರ್‌, ಕಾರ್ಯಾಧ್ಯಕ್ಷೆ ಅನಿತ ಸುರೇಂದ್ರ ಕುಮಾರ್‌, ಕರ್ನಾಟಕ ಜೈನ ಸಂಘದ ಅಧ್ಯಕ್ಷ ಎಸ್‌.ಜಿತೇಂದ್ರ ಕುಮಾರ್‌, ಕಾರ್ಯದರ್ಶಿ ಎಚ್‌.ಬಿ.ದೇವೇಂದ್ರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next