Advertisement
ಜೈನ ರುಚಿಯ ಇಲ್ಲಿನ ಭೋಜನಕ್ಕೆ ಮಾರುಹೋಗದವರೇ ಇಲ್ಲ. 1400 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ರಾಜರ ಆಡಳಿತಕ್ಕೂ ಒಳಪಟ್ಟಿತ್ತು. ಅಂದಿನಿಂದಲೂ ದಾಸೋಹ ಪರಂಪರೆ ಇದೆ. ಸಾಂತರಸರು ಈ ಕ್ಷೇತ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರ ವರ್ಷ ಆಳಿದ್ದರು. ನಂತರದ ಕಾಲದಲ್ಲೂ ಚತುರ್ವಿಧ ದಾನಗಳು ನಡೆಯುತ್ತಾ ಬಂದಿವೆ.
Related Articles
– ಎರಡು ಮಹಡಿಯ ಭೋಜನಶಾಲೆ
– ಏಕಕಾಲದಲ್ಲಿ 500 ಮಂದಿ ಭೋಜನ ಸಾಮರ್ಥ್ಯ
Advertisement
ಭಕ್ಷ್ಯ ಸಮಾಚಾರ– ಜೈನಶೈಲಿಯ ಭೋಜನ. ಈರುಳ್ಳಿ- ಬೆಳ್ಳುಳ್ಳಿ ಬಳಸದೆ ಅಡುಗೆ.
– ನಿತ್ಯದ ಊಟದಲ್ಲಿ ಅನ್ನ, ಸಾಂಬಾರು, ಪಲ್ಯ, ಪಾಯಸ, ಉಪ್ಪಿನಕಾಯಿ, ಮಜ್ಜಿಗೆ ಇರುತ್ತದೆ.
– ಜಾತ್ರೆ, ಶ್ರಾವಣ, ನವರಾತ್ರಿ, ಕಾರ್ತಿಕ ಮಾಸದ ವಿಶೇಷ ದಿನಗಳಲ್ಲಿ ಕೋಸಂಬರಿ, ಪಲಾವ್, ಜಿಲೇಬಿ, ಪುಳಿಯೊಗರೆ, ಹುಣಸೇಗಟ್ಟಿ, ಸಂಡಿಗೆ, ಮೊಸರುಬಜ್ಜಿ, ಚಟ್ನಿ ಇತ್ಯಾದಿ.
– ಪ್ರತಿದಿನ ಬೆಳಗ್ಗೆ ಉಪಾಹಾರವಾಗಿ ಉಪ್ಪಿಟ್ಟು, ಪೇಪರ್ ಅವಲಕ್ಕಿ, ಉಪ್ಪಿನಕಾಯಿ, ಟೀ- ಕಾಫಿ ವ್ಯವಸ್ಥೆ.
– ವಿಶೇಷ ದಿನಗಳಲ್ಲಿ ಉಪಾಹಾರಕ್ಕೆ ಇಡ್ಲಿ, ಸಾಂಬಾರ್, ಗೋದಿಹಲ್ವಾ. ವೇಳಾಪಟ್ಟಿ
ಉಪಾಹಾರ: ಬೆಳಗ್ಗೆ 8ರಿಂದ 9.30ರವರೆಗೆ
ಮಧ್ಯಾಹ್ನ ಭೋಜನ: ಮಧ್ಯಾಹ್ನ 12ರಿಂದ 2
ರಾತ್ರಿ ಭೋಜನ: ಸಂಜೆ 4.30ರಿಂದ 6ರವರೆಗೆ ಸಂಖ್ಯಾ ಸೋಜಿಗ
1- ಕ್ವಿಂಟಲ್ ಅಕ್ಕಿಯಿಂದ ಅನ್ನ
6- ಬಾಣಸಿಗರಿಂದ ಅಡುಗೆ ತಯಾರಿ
20- ಕಿಲೋ ತರಕಾರಿ ನಿತ್ಯ ಬಳಕೆ
750- ಮಂದಿಗೆ ನಿತ್ಯ ಭೋಜನ
1500 - ಮಂದಿ, ವಿಶೇಷ ದಿನಗಳಲ್ಲಿ ಭೋಜನ
2016- ನೂತನ ಭೋಜನ ಶಾಲೆ ಆರಂಭ
3,50,000- ಮಂದಿ, ಈ ವರ್ಷ ಭೋಜನ ಸ್ವೀಕಾರ * ಶರತ್ ಭದ್ರಾವತಿ