ಮುಂಬಯಿ: ತುಳು-ಕನ್ನಡಿಗರ ಹಿರಿಯ ಧಾರ್ಮಿಕ ಸಂಸ್ಥೆ ಶ್ರೀ ಮದ್ಭಾರತ ಮಂಡಳಿಯ ಅಂಧೇರಿ ಪಶ್ಚಿಮದ ವೀರದೇಸಾಯಿ ರೋಡ್‌ನ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಪ್ರತಿ ವರ್ಷ ಧಾರ್ಮಿಕ ಕಾವ್ಯಗ್ರಂಥಗಳ ಪ್ರವಚನ ನಡೆಯುತ್ತಿರುವಂತೆ ಈ ಬಾರಿಯೂ ಜೂ. 16 ರಂದು ಸಂಜೆ 6.30 ರಿಂದ ಲಕ್ಷ್ಮೀಶ ಕವಿ ವಿರಚಿತ ಜೈಮಿನಿ ಭಾರತ ಕಾವ್ಯ ಗ್ರಂಥದ ಪ್ರವಚನ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಈ ವರ್ಷ ಗ್ರಂಥ ವಾಚನದಲ್ಲಿ ಯಾಧವಿ ಎಂ. ಕರ್ಕೇರ ಕಿದಿಯೂರು, ಗ್ರಂಥ ವಿವರಣೆಯಲ್ಲಿ ವಿದ್ವಾನ್ ನಾರಾಯಣ ಎಂ. ಬಂಗೇರ ಮಿತ್ರಪಟ್ಣ, ಅರ್ಚಕರಾಗಿ ವಾಸು ಎಸ್. ಉಪ್ಪೂರು, ಚಾಮರ ಸೇವಕರಾಗಿ ಚರಂತಿಪೇಟೆ ಶಶಿ ಕುಮಾರ್ ಕೋಟ್ಯಾನ್ ಮತ್ತು ಬೈಕಂಪಾಡಿ ಹರೀಶ್ ಎಸ್. ಪುತ್ರನ್, ಜನಮೇಜಯನಾಗಿ ದೊಡ್ಡಕೊಪ್ಲ ದೇವದಾಸ್ ಪಿ. ಕರ್ಕೇರ, ಪೂಜಾ ಮೇಲ್ವಿಚಾರಕರಾಗಿ ಎಚ್. ಮಹಾಬಲ ಅವರು ಸಹಕರಿಸಿದರು.
ಪ್ರಾರಂಭದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ದೇವರಿಗೆ ವಿಶೇಷ ಪೂಜೆ, ಮಹಾಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ಇನ್ನಿತರ ಕಾರ್ಯಕ್ರಮಗಳು ನಡೆದವು. ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್, ಉಪಾಧ್ಯಕ್ಷರುಗಳಾದ ಒಡೆಯರಬೆಟ್ಟು ರಘುನಾಥ ಬಿ. ಕುಂದರ್ ಮತ್ತು ಬಂಟ್ವಾಡಿ ಸಂಜೀವ ಬಿ. ಚಂದನ್, ಪ್ರಧಾನ ಕಾರ್ಯದರ್ಶಿ ಗುಂಡಿ ವಿ. ಕೆ. ಸುವರ್ಣ, ಗೌರವ ಪ್ರಧಾನ ಕೋಶಾಧಿಕಾರಿ ಮೂಳೂರು ಕೇಶವ ಆರ್. ಪುತ್ರನ್, ಜತೆ ಕಾರ್ಯದರ್ಶಿಗಳಾದ ಸಣ್ಣಗುಂಡಿ ಲೋಕನಾಥ್ ಪಿ. ಕಾಂಚನ್, ಪಲಿಮಾರು ಎಚ್. ಸಿ. ಕಾಂಚನ್, ಗೌರವ ಜತೆ ಕೋಶಾಧಿಕಾರಿಗಳಾದ ಬೈಕಂಪಾಡಿ ಶ್ಯಾಮ ಕೆ. ಪುತ್ರನ್, ಅಶೋಕ್ ಎನ್. ಸುವರ್ಣ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು.
ಸಮಿತಿಯ ಸದಸ್ಯರುಗಳಾದ ಟ್ರಸ್ಟಿ ನಾಗೇಶ್ ಎಲ್. ಮೆಂಡನ್, ಗಂಗಾ ಧರ ಟಿ. ಸಾಲ್ಯಾನ್, ಶಶಿಕುಮಾರ್ ಕೋಟ್ಯಾನ್, ಸುರೇಂದ್ರನಾಥ್ ಹಳೆಯಂಗಡಿ, ಲೋಕನಾಥ ಓಡಿ ಮೆಂಡನ್, ಗಂಗಾಧರ ಎಸ್. ಕರ್ಕೇರ, ದೇವದಾಸ್ ಪಿ. ಕರ್ಕೇರ, ಎಚ್. ಮಹಾಬಲ, ಗೋವಿಂದ ಎನ್. ಪುತ್ರನ್, ವಾಸು ಎಸ್. ಉಪ್ಪೂರು, ಅಶೋಕ್ ಎನ್. ಸುವರ್ಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರತೀ ದಿನ ಶನಿವಾರ ಸಂಜೆ 5.30 ರಿಂದ ಮತ್ತು ಪ್ರತಿ ರವಿವಾರ ಅಪರಾಹ್ನ 3.30ರಿಂದ ಸಂಜೆ 6 ರವರೆಗೆ ಪಾರಾಯಣ ಜರಗಲಿದೆ. ಪ್ರತಿ ಹುಣ್ಣಿಮೆಯ ದಿನದಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪ್ರತಿ ಅಮಾವಾಸ್ಯೆಯ ದಿನದಂದು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯು ಮಂದಿರದಲ್ಲಿ ನಡೆಯುತ್ತಿದೆ.
ಶ್ರೀ ಲಕ್ಷ್ಮೀನಾರಾಯಣ ಪ್ರಭುವಿನ ಸನ್ನಿಧಾನದಲ್ಲಿ ಜರಗಲಿರುವ ಗ್ರಂಥ ವಾಚನ ಪ್ರವಚನದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ