Advertisement
ರಜಿನಿಕಾಂತ್ ಅವರ ಸಾವಿರಾರು ಅಭಿಮಾನಿಗಳು, ಸಿನಿಮಾ ತಂಡ ಹಾಗೂ ಚಿತ್ರರಂಗದ ಇತರ ಗಣ್ಯರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
Related Articles
Advertisement
ಇದನ್ನೂ ಓದಿ: Aachar & co movie review: ಮೆಟ್ರೋ ಮಂದಿ ಮುಂದೆ ರೆಟ್ರೋ ಸಿನಿಮಾ
“ಇತ್ತೀಚೆಗಿನ ದಿನಗಳಲ್ಲಿ ನಾನು ಹಲವು ಸ್ಕ್ರಿಪ್ಟ್ ಗಳನ್ನು ರಿಜೆಕ್ಟ್ ಮಾಡಿದೆ. “ಅಣ್ಣಾಥೆ” ಸಿನಿಮಾದ ಬಳಿಕ ಬಂದ ಸ್ಕ್ರಿಪ್ಟ್ ಗಳು ʼಬಾಷಾʼ, ʼಅಣ್ಣಾಮಲೈʼ ಸಿನಿಮಾದ ಕಥೆಗಳಂತೆಯೇ ಇದ್ದವು. ಎಲ್ಲವೂ ಒಂದೇ ರೀತಿಯ ಕಥೆಯಾಗಿದ್ದರಿಂದ ಒಂದು ಸಮಯದಲ್ಲಿ ನಾನು ಕಥೆ ಕೇಳುವುದನ್ನೇ ನಿಲ್ಲಿಸಿಬಿಟ್ಟಿದ್ದೆ” ಎಂದು ರಜಿನಿಕಾಂತ್ ಹೇಳಿದರು.
ನೆಲ್ಸನ್ ಅವರ ಈ ಹಿಂದಿನ ʼಬೀಸ್ಟ್ʼ ಸಿನಿಮಾ ನಿರೀಕ್ಷೆ ಮಾಡಿದ್ದಷ್ಟು ಗಳಿಕೆ ಕಂಡಿಲ್ಲ. ಆದರೆ ವಿತರಿಕರಿಗೆ ನಷ್ಟವಾಗಿಲ್ಲ. ನಾನು ʼಜೈಲರ್ʼ ಸಿನಿಮಾ ಅನೌನ್ಸ್ ಮಾಡಿದ ಬಳಿಕ, ಅನೇಕರು ಆನ್‌ಲೈನ್ ನಲ್ಲಿ ನಿರ್ದೇಶಕರನ್ನು ಬದಲಾಯಿಸುವಂತೆ ಆಗ್ರಹಿಸಿದ್ದರು. ಆದರೆ ನಾನು ನೆಲ್ಸನ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿದ್ದೆ. ಆ ಬಳಿಕ ನಾನು ಟ್ವಿಟರ್ ನಲ್ಲಿ ʼಜೈಲರ್ʼ ಫೋಟೋ ಹಾಕಿದೆ” ಎಂದು ನಟ ಹೇಳಿದರು.
“ಜೈಲರ್ʼ ಸಿನಿಮಾದ “ಹುಕುಂ” ಹಾಗೂ “ಜುಜುಬಿ” ಹಾಡನ್ನು ಬರೆದ ಗೀತಾರಚನೆಕಾರ ಸೂಪರ್ ಸುಬ್ಬು ಅವರ ಬಳಿ, ʼಹುಕುಂʼ ಹಾಡಿನಲ್ಲಿದ್ದ ʼಸೂಪರ್ ಸ್ಟಾರ್ʼ ಪದವನ್ನು ತೆಗೆಯಲು ವಿನಂತಿಸಿದ್ದೆ. ʼಸೂಪರ್ ಸ್ಟಾರ್ʼ ಎಂಬ ಪದ ಯಾವಾಗಲೂ ಸಮಸ್ಯೆ” ಎಂದು ಹೇಳಿದರು.
ಮಾತಿನ ಕೊನೆಯಲ್ಲಿ ರಜಿನಿಕಾಂತ್ ಸಿನಿಮಾದಲ್ಲಿ ನಟಿಸಿರುವ ಕಲಾವಿದರಿಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷ ಪಾತ್ರದಲ್ಲಿ ನಟಿಸಿದ್ದ ಮೋಹನ್ ಲಾಲ್ ಅವರ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು.
ʼಜೈಲರ್ʼ ಇದೇ ಆಗಸ್ಟ್ 10 ರಂದು ವರ್ಲ್ಡ್ ವೈಡ್ ಅದ್ಧೂರಿಯಾಗಿ ತೆರೆಗೆ ಬರಲಿದೆ.