Advertisement

ದಯಾಮರಣ: ಸುಳ್ಳು ಹೇಳಿದ್ರೆ ಕೋಟಿ ದಂಡ

06:00 AM Dec 18, 2017 | Harsha Rao |

ನವದೆಹಲಿ: ದೇಶದಲ್ಲಿ ದಯಾಮರಣ ಬೇಕೇ ಬೇಡವೇ ಎಂಬ ಇರುವಾಗಲೇ ಅದಕ್ಕೆ ಸಂಬಂಧಿಸಿದ ಮಸೂದೆಗೆ ತಿದ್ದುಪಡಿ ತರಲಾಗಿದೆ. ಸೂಪರ್‌ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಪರೋಕ್ಷ ದಯಾಮರಣ ಕೋರಿ ಸಲ್ಲಿಸಲಾಗುವ ಅರ್ಜಿಗಳ ಪರಿಶೀಲನೆಗೆ ಸಮಿತಿ ರಚಿಸಬೇಕು. ಒಂದು ವೇಳೆ ಆ ಸಮಿತಿಗೆ ನೀಡಲಾಗುವ ಮಾಹಿತಿ ತಪ್ಪು ಎಂದು ಗೊತ್ತಾದಲ್ಲಿ 20 ಲಕ್ಷ ರೂ.ಗಳಿಂದ 1 ಕೋಟಿ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಇಷ್ಟು ಮಾತ್ರವಲ್ಲ 5-10 ವರ್ಷಗಳ ವರೆಗೆ ಜೈಲು
ಶಿಕ್ಷೆಯನ್ನೂ ವಿಧಿಸುವ ಬಗ್ಗೆ ಪ್ರಸ್ತಾಪವಿದೆ ಇಷ್ಟು ಮಾತ್ರವಲ್ಲ, ಯಾವುದೇ ಚಿಕಿತ್ಸೆಯಿಂದ ಕಾಯಿಲೆ ಗುಣವಾಗದು ಎಂದು ಉಪ ಶಾಮಕ (ಪ್ಯಾಲಿಯೇಟಿವ್‌) ಚಿಕಿತ್ಸೆ ಪಡೆಯುತ್ತಿರುವವರಿಗೂ ಪರೋಕ್ಷ ದಯಾಮರಣ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಪರೋಕ್ಷ ದಯಾಮರಣದಿಂದ ಉಂಟಾಗುವ ಸಾವನ್ನು “ಸಹಜ ಸಾವು’ ಎಂದು ಪರಿಗಣಿಸಲಾಗುತ್ತದೆ.

Advertisement

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ತನಗೆ ಚಿಕಿತ್ಸೆ ನಿಲ್ಲಿಸುವಂತೆ ಮನವಿ ಮಾಡುವುದೇ ಪರೋಕ್ಷ ದಯಾಮರಣ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಇದು ದಯಾಮರಣಕ್ಕೆ ಪ್ರೋತ್ಸಾಹ ನೀಡುವ ಪ್ರಕ್ರಿಯೆ ಅಲ್ಲ ಎಂದಿದೆ. ಕಳೆದ ಮೇನಲ್ಲಿ ಕರಡು ಮಸೂದೆಯನ್ನು ಕೇಂದ್ರ ಆರೋಗ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next