ಅಲ್ಲಿಯೇ ತಿಂಡಿ ಊಟ ಮಾಡಿಕೊಂಡು ಓದಿಕೊಳ್ಳುತ್ತೇವೆ ಎಂದು ನಗರದ ಬಂಬೂ ಬಜಾರ್‌ನಲ್ಲಿರುವ ಪರಿಶಿಷ್ಟ ಪಂಗಡ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಮಾತನಾಡಿದ ವಿದ್ಯಾರ್ಥಿಗಳು, ತಾಲೂಕಿನ ಜೈಲುನಲ್ಲಿರುವ ಖೈದಿಗಳಿಗೆ ಉತ್ತಮ ಆಹಾರ ನೀಡಿ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಪರಾಧ ಮಾಡಿದ ಖೈದಿಗಳನ್ನು ಸುರಕ್ಷಿತವಾಗಿ ನೋಡಿ
ಕೊಳ್ಳುತ್ತಿರುವ ಈ ಸರ್ಕಾರ ವಿದ್ಯಾರ್ಥಿಗಳ ಜೀವನದ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷಿಸಿದೆ ಎಂದು ದೂರಿದರು. ಅಧಿಕಾರಿಗಳ ನಿರ್ಲಕ್ಷ್ಯಾ: ನಗರದ ಬಂಬೂ ಬಜಾರ್‌ನಲ್ಲಿರುವ ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಳಪೆ ಆಹಾರ ವಿತರಣೆ, ಮೆನು ಕಡೆಗಣಿಸಿ ಊಟ
ವಿತರಣೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳಿವೆ. ಇವನ್ನು ಪರಿಹರಿಸಲು ಒತ್ತಾಯಿಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೆ ಅಧಿಕಾರಿ, ನಮ್ಮ ಬಗ್ಗೆ ಅಥವಾ ನಮ್ಮ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಳಲು ತೋಡಿಕೊಂಡಿದ್ದಾರೆ.
ಜೈಲುಗಳಲ್ಲೇ ಹೆಚ್ಚು ಸೌಲಭ್ಯ: ಜೈಲುಗಳಲ್ಲಿರುವ ಪ್ರತಿ ಖೈದಿಗೆ ದಿನದ ಆಹಾರ ಖರ್ಚಿಗೆಂದು 75 ರೂ. ನೀಡುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ಮಾತ್ರ 42 ರೂ. ನೀಡುತ್ತಾರೆ. ಅಪರಾಧ ಮಾಡಿದ ವ್ಯಕ್ತಿಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ವಿದ್ಯಾಭ್ಯಾಸ ಮಾಡಿ, ದೇಶ ಕಟ್ಟುವ ವಿದ್ಯಾರ್ಥಿಗಳಿಗೆ ಕಡಿಮೆ ಅನುದಾನ ನೀಡಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಸ್ಪಂದಿಸದ ನಿಲಯ ಪಾಲಕರು: ನಿಲಯದಲ್ಲಿ ಹಲವು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿದ್ದರೂ ನಿಲಯ ಪಾಲಕರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಸಮಸ್ಯೆ ಇದೆ ಎಂದು ಹೇಳಿದರೆ ವಿದ್ಯಾರ್ಥಿಗಳನ್ನು ಬಯ್ಯುತ್ತಾರೆಂದು ನೋವು ತೋಡಿಕೊಂಡರು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳನ್ನು ಒಂದೇ ಹಾಸ್ಟೆಲ್‌ಗಳಿಗೆ ಸೇರಿಸಬೇಕು. ಒಂದೇ ಕಡೆ ಒಂದೇ ರೀತಿಯ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
Advertisement