Advertisement

Karachi: ಜೈಲು ಮೇಲೆ ದಾಳಿ: 5 ಉಗ್ರರ ಹತ್ಯೆ

08:43 PM Jan 30, 2024 | Team Udayavani |

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಾಚ್‌ ಎಂಬ ಜೈಲಿನ ಮೇಲೆ ಉಗ್ರರ ದಾಳಿಯನ್ನು ವಿಫ‌ಲಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕನಿಷ್ಠ 5 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಅವರು ಬಲೂಚಿಸ್ತಾನ ಲಿಬರೇಷನ್‌ ಆರ್ಮಿಗೆ ಸೇರಿದವರು.

Advertisement

ಸೋಮವಾರ ತಡರಾತ್ರಿ ಭಯೋತ್ಪಾದಕರು ಜೈಲಿನ ಮೇಲೆ 15 ರಾಕೆಟ್‌ಗಳನ್ನು ಉಡಾಯಿಸುವುದರ ಮೂಲಕ ದಾಳಿ ನಡೆಸಿದ್ದಾರೆ. ಸುದ್ದಿ ತಿಳಿಸಿದ ಕೂಡಲೇ ಪಾಕಿಸ್ತಾನ ಸೇನೆ ಮತ್ತು ಪೊಲೀಸರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ದಾಳಿ ನಡೆಸಿದ 5 ಉಗ್ರರನ್ನು ಕೊಲ್ಲಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next