Advertisement

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

12:10 PM Apr 18, 2024 | Team Udayavani |

ಬೆಂಗಳೂರು: ರಾಮನವಮಿ ಹಿನ್ನೆಲೆಯಲ್ಲಿ ಜೈ ಶ್ರೀರಾಮ್‌ ಎಂದು ಜೈಕಾರ ಕೂಗಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಮೂವರು ಯುವಕರನ್ನು ಅಡ್ಡಗಟ್ಟಿದ ಅನ್ಯಕೋಮಿನ ಇಬ್ಬರು ಯುವಕರು, “ಶ್ರೀರಾಮ್‌ ಬದಲು ಅಲ್ಲಾಹು ಅಕºರ್‌ ಎಂದು ಘೋಷಣೆ ಕೂಗ ಬೇಕು’ ಎಂದು ಒತ್ತಾಯಿಸಿ, ಇತರ ಮೂವರು ಸ್ನೇಹಿತರ ಜತೆ ಸೇರಿ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯಲ್ಲಿ ಬುಧವಾರ ನಡೆದಿದೆ.

Advertisement

ಘಟನೆಯಲ್ಲಿ ಕೆ.ಜಿ.ಹಳ್ಳಿ ನಿವಾಸಿಗಳಾದ ವಿನಾಯಕ್‌, ರಾಹುಲ್‌ ಹಾಗೂ ಪವನ್‌ ಎಂಬುವರು ಗಾಯಗೊಂಡಿದ್ದಾರೆ.

ಈ ಸಂಬಂಧ ಅನ್ಯ ಕೋಮಿನ ಎಂಎಸ್‌ ಪಾಳ್ಯ ನಿವಾಸಿ ಸಮೀರ್‌, ಫ‌ರ್ಮಾನ್‌, ಇಬ್ಬರು ಬಾಲಕರನ್ನು ಬಂಧಿಸ ಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹಲ್ಲೆಗೊಳಗಾದ ಮೂವರು ಯುವಕರು ಮಧ್ಯಾಹ್ನ 3.20ರ ಸುಮಾರಿಗೆ ಕಾರಿನಲ್ಲಿ ಕೆ.ಜಿ.ಹಳ್ಳಿಯಿಂದ ಚಿಕ್ಕಬೆಟ್ಟಹಳ್ಳಿ ರಸ್ತೆ ಮಾರ್ಗವಾಗಿ ಎಂ.ಎಸ್‌.ಪಾಳ್ಯದಲ್ಲಿ ಸೆಕೆಂಡ್‌ ಹ್ಯಾಂಡ್‌ ಬೈಕ್‌ ಖರೀದಿಗೆ ಹೋಗುತ್ತಿದ್ದರು. ಕಾರಿನಲ್ಲಿ ಶ್ರೀರಾಮ ಭಾವಚಿತ್ರದ ಧ್ವಜ ಕ್ಟಟ್ಟಿದ್ದು ಜತೆಗೆ ಜೈಶ್ರೀರಾಮ್‌ ಎಂದು ಘೋಷಣೆ ಕೂಗುತ್ತಿದ್ದರು.

ಆಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಸಮೀರ್‌, ಫ‌ರ್ಮಾನ್‌ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, “ಜೈ ಶ್ರೀರಾಮ್‌ ಎಂದು ಹೇಳಬೇಕಾ? ಜೈ ಶ್ರೀರಾಮ್‌ ನೋ. ಒನ್ಲಿ ಅಲ್ಲಾಹು ಅಕ್ಬರ್‌ ಎಂದು ಹೇಳಲು’ ಒತ್ತಾಯಿಸಿದ್ದಾನೆ. ಆತನೊಂದಿಗಿದ್ದ ಮತ್ತೂಬ್ಬ ಯುವಕ ಆಶ್ಲೀಲವಾಗಿ ನಿಂದಿಸಿದ್ದಾನೆ. ಆಗ ಕಾರಿನಲ್ಲಿದ್ದ ಯುವಕರು ಹಾಗೆ ಕೂಗಲು ಸಾಧ್ಯವಿಲ್ಲ. ನಿಮ್ಮ ಹಬ್ಬಕ್ಕೆ ನಾವು ತೊಂದರೆ ಕೊಡ್ತಿವಾ. ನಮ್ಮ ಹಬ್ಬ ನಾವು ಮಾಡ್ತೀವಿ ಬಿಡಿ ಎಂದಿದ್ದಾರೆ. ಅದು ಎರಡು ಗುಂಪಿನ ಯುವಕರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಬಳಿಕ ಕಾರಿನಿಂದ ಯುವಕರು ಇಳಿಯುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Advertisement

ಬಳಿಕ ಅವರನ್ನು ಹಿಂಬಾಲಿಸಿದ ಯುವಕರಿಗೆ, ರಸ್ತೆಯೊಂದರಲ್ಲಿ ಅಡ್ಡಗಟ್ಟಿದ ಆರೋಪಿಗಳು ಇತರ ಮೂವರು ಸ್ನೇಹಿತರನ್ನು ಕರೆಸಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ರಾಹುಲ್‌ ಎಂಬಾತನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಪವನ್‌ ಎಂಬಾತ ಮೂಗಿನ ಮೂಳೆ ಮುರಿದಿದೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿನಾಯಕ್‌ಗೂ ಗಾಯವಾಗಿದೆ ಎಂದು ಪೊಲೀಸರು ಹೇಳಿದರು.

ವಿಡಿಯೋ ವೈರಲ್‌: ಆರೋಪಿಗಳು ಜೈಶ್ರೀರಾಮ್‌ ಎಂದು ಕೂಗಬೇಡಿ. ಅಲ್ಲಾ ಹು ಅಕºರ್‌ ಎಂದು ಕೂಗ ಬೇಕು ಎಂದು ಒತ್ತಾಯಿಸಿ, ಕಾರಿನಲ್ಲಿದ್ದ ಯುವಕರ ಜತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಹಲ್ಲೆಗೊಳಗಾದವರ ಮನೆಗೆ ಶೋಭಾ ಭೇಟಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತ ರಾಹುಲ್‌ ಮತ್ತು ಪವನ್‌ ಅವರ ಮನೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿ ಬಳಿ ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದಕ್ಕೆ ಅನ್ಯಕೋಮಿನ ಯುವಕರು ಮತ್ತೂಂದು ಕೋಮಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ●ಲಕ್ಷ್ಮೀಪ್ರಸಾದ್‌ ಈಶಾನ್ಯ ವಿಭಾಗದ ಡಿಸಿಪಿ

ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣದ ಅತಿರೇಕ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದರು. ಇದೀಗ ಶ್ರೀ ರಾಮ ನವಮಿ ದಿನದಂದು ಜೈ ಶ್ರೀ ರಾಮ್‌ ಘೋಷಣೆ ಕೂಗಿದವರ ಮೇಲೆ ಜನನಿಬಿಡ ರಸ್ತೆಯಲ್ಲಿ ಹಲ್ಲೆ ನಡೆಸಿ ದ್ದಾರೆ. ಇದೆಲ್ಲಾ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣದ ಅತಿರೇಕ ಪ್ರತಿಕ್ರಿಯೆಗಳು. ಇದನ್ನು ಗಮನಿಸುತ್ತಿರುವ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ●ಆರ್‌.ಅಶೋಕ್‌, ವಿಪಕ್ಷ ನಾಯಕ ■ ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next