Advertisement
ಬುಧವಾರ ನಡೆದ ಸಮಾರಂಭದಲ್ಲಿ, ರಾಜ್ಯಪಾಲ ಆಚಾರ್ಯ ದೇವ್ರತ್, ಠಾಕೂರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಧುರೀಣ ಎಲ್.ಕೆ. ಆಡ್ವಾಣಿ ಹಾಗೂ ಕೇಂದ್ರದ ಹಲವಾರು ಸಚಿವರು ಭಾಗಿಯಾಗಿದ್ದರು. ಠಾಕೂರ್ ಜತೆಗೆ 12 ಸಚಿವರು ಪ್ರಮಾಣ ಸ್ವೀಕರಿಸಿದರು. ಇವರಲ್ಲಿ ಸುರೇಶ್ ಭಾರದ್ವಾಜ್ ಹಾಗೂ ಗೋವಿಂದ್ ಸಿಂಗ್ ಠಾಕೂರ್ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಆರು ಮಂದಿಯದ್ದು ಚೊಚ್ಚಲ ಸಂಪುಟ ಪ್ರವೇಶ. ಸಾರ್ವಿನ್ ಚೌಧರಿ ಅವರು ಮಂತ್ರಿ ಮಂಡಲದಲ್ಲಿರುವ ಏಕೈಕ ಮಹಿಳಾ ಸಚಿವೆ.
ಠಾಕೂರ್‌ರನ್ನು ಮುಖ್ಯಮಂತ್ರಿಯ ನ್ನಾಗಿಸಿರುವುದು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದ್ವಿತೀಯ ಸಾಲಿನ ನಾಯಕರನ್ನು ಮಂಚೂಣಿಗೆ ತರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ದೂರಾಲೋ ಚನೆಯ ಫಲ ಎಂದು ವಿಶ್ಲೇಷಿಸಲಾ ಗಿದೆ. ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮುಖ್ಯಮಂತ್ರಿ ಗಳು 40ರಿಂದ 70 ವರ್ಷದೊಳಗಿನ ನಾಯಕರೇ. ದೇವೇಂದ್ರ ಫಡ್ನವೀಸ್ (47), ಯೋಗಿ ಆದಿತ್ಯನಾಥ್ (45), ತ್ರಿವೇಂದ್ರ ಸಿಂಗ್ ರಾವತ್ (57), ರಘುಬಾರ್ ದಾಸ್ (62) ಹಾಗೂ ಮನೋಹರ್ ಲಾಲ್ ಖಟ್ಟರ್ (62) ಅವರ ಸಾಲಿಗೆ ಠಾಕೂರ್ ಕೂಡ ಸೇರಿದ್ದಾರೆ.