Advertisement

ಕೇಸರಿ ಆಡಿಯೋ ಬಂತು

05:53 PM Apr 04, 2019 | Team Udayavani |

“ಜೈ ಕೇಸರಿ ನಂದನ’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದರ ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಭಾ.ಮ. ಹರೀಶ್‌ ಹಾಗೂ ಚಿತ್ರತಂಡದ ಸದಸ್ಯರು ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿದರು.

Advertisement

ಅಂದಹಾಗೆ, ಇದು ನಾಟಕವನ್ನಾಧರಿಸಿದ ಸಿನಿಮಾ. ಹನುಮಂತ ಹಾಲಿಗೇರಿ ಅವರ “ಊರು ಸುಟ್ಟರೂ ಹನುಮಪ್ಪ ಹೊರಗ’ ಇದೀಗ “ಜೈ ಕೇಸರಿನಂದನ’ ಹೆಸರಿನ ಚಿತ್ರವಾಗಿದೆ. ಶ್ರೀಧರ್‌ ಜಾವೂರ ಚಿತ್ರಕಥೆ, ಸಂಭಾಷಣೆಯೊಂದಿಗೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಶ್ರೀಧರ್‌ “ಕೆಂಗುಲಾಬಿ’ ಚಿತ್ರ ನಿರ್ದೇಶಿಸಿದ್ದರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶನ ಶ್ರೀಧರ್‌, “ಜೈ ಕೇಸರಿನಂದನ’ ಚಿತ್ರದಲ್ಲಿ ಎರಡು ಗ್ರಾಮಗಳ ನಡುವೆ ನಡೆಯುವ ಕಿತ್ತಾಟದ ಕಥೆ ಇದೆ. ಎರಡೂ ಗ್ರಾಮಗಳಿಗೆ ಸಂಬಂಧಿಸಿದ ಹನುಮಪ್ಪನನ್ನು ರಾತ್ರೋರಾತ್ರಿ ಒಂದೂರಿನವರು ಕದ್ದೊಯ್ಯುತ್ತಾರೆ. ಮರುದಿನ ಹನುಮಪ್ಪನನ್ನು ಇನ್ನೊಂದು ಊರಿನವರು ಹುಡುಕಿ ಬಂದಾಗ ಎರಡೂ ಊರುಗಳ ನಡುವೆ ದೊಡ್ಡ ಗಲಭೆಯಾಗುತ್ತದೆ. ನಂತರ ಆ ಘಟನೆ ಪೊಲೀಸ್‌ ಮೆಟ್ಟಿಲೇರುತ್ತದೆ. ಪೊಲೀಸರು ಆರೋಪಿಗಳು ಸಿಗದಿದ್ದರಿಂದ ಹನುಮಪ್ಪನನ್ನೇ ಜೈಲಿನಲ್ಲಿಡುತ್ತಾರೆ ಮುಂದೆ ಏನೆಲ್ಲಾ ನಡೆದು ಹೋಗುತ್ತದೆ ಎಂಬುದನ್ನು ವಿಡಂಬನಾತ್ಮಕ ನಿರೂಪಣೆಯೊಂದಿಗೆ ಚಿತ್ರ ಸಾಗುತ್ತದೆ ಎನ್ನುವುದು ಅವರ ಮಾತು. ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ನೀಡಲಾಗಿದೆ. ಚಿತ್ರದಲ್ಲಿ ಕಲಾತ್ಮಕ ಮತ್ತು ಕಮರ್ಷಿಯಲ್‌ ಅಂಶಗಳೂ ಇರಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಚರ್ಚೆಗೆ ಕಾರಣ ಆಗುವ ಕಥಾವಸ್ತು ಚಿತ್ರದಲ್ಲಿದೆ ಎಂಬುದು ನಿರ್ದೇಶಕರ ಮಾತು.

ಚಿತ್ರವನ್ನು ಶಶಿ ದಾನಿ, ಪ್ರವೀಣ ಪತ್ರಿ, ನಾರಾಯಣಸಾ, ಲಕ್ಷ್ಮಣ ಸಿಂಗ್ರಿ ಸೇರಿ ನಿರ್ಮಿಸಿದ್ದಾರೆ. ಶಶಿದಾನಿಯವರು ಸಿನಿಮಾ ಆರಂಭವಾದ ಹಾಗೂ ಆ ನಂತರ ಸುಗಮವಾಗಿ ಚಿತ್ರೀಕರಣವಾದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಗುರುರಾಜ ಹೊಸಕೋಟೆ, ರಾಜು ತಾಳಿಕೋಟೆ ಸೇರಿದಂತೆ ಹೊಸ ಪ್ರತಿಭೆಗಳಾದ ಶಶಿ ದಾನಿ, ಕಲ್ಲೇಶವರ್ಧನ, ಪ್ರವೀಣ ಪತ್ರಿ, ಅನಿಲ್ ಜಾವೂರ, ಭರತ ತಾಳಿಕೋಟೆ, ಅಮೃತ ಆರ್‌ ಗಡ್ಡದವರ, ಅಶ್ವಿ‌ನಿ, ಅಮೃತ ಕಾಳೆ ಮತ್ತು ಅಂಜಶ್ರೀ ನಟಿಸಿದ್ದಾರೆ. ಅಮೃತ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡು ಖುಷಿಯಾದರು. ಚಿತ್ರಕ್ಕೆ ನಾಗೇಶ ವಿ. ಆಚಾರ್ಯ ಛಾಯಾಗ್ರಹಣವಿದೆ. ರಾಜಕಿಶೋರ್‌ ರಾವ್‌ ಸಂಗೀತವಿದೆ. ಈಶ್ವರ ಸಂಕಲನ, ಥ್ರಿಲ್ಲರ್‌ ಮಂಜು ಸಾಹಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next