Advertisement
ಪ್ರಮುಖವಾಗಿ ತೆಲುಗಿನ ʼಪುಷ್ಪʼ, ʼಆರ್ ಆರ್ ಆರ್ʼ ಸಿನಿಮಾಗಳು ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ 69ನೇ ನ್ಯಾಷನಲ್ ಆವಾರ್ಡ್ ನಲ್ಲಿ ಸದ್ದು ಮಾಡಿದೆ. ಆದರೆ ತಮಿಳು, ಮಲಯಾಳಂ ಸೇರಿ ಕೆಲ ಸೂಪರ್ ಹಿಟ್ ಹಾಗೂ ಗಮನ ಸೆಳೆದ ಸಿನಿಮಾಗಳಿಗೆ ಯಾವ ರಾಷ್ಟ್ರ ಪ್ರಶಸ್ತಿಯೂ ಲಭಿಸದೇ ಇರುವುದರಿಂದ ಕೆಲ ಸಿನಿ ಪ್ರೇಕ್ಷಕರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ʼಜೈ ಭೀಮ್ʼ, ʼಕರ್ಣನ್, ಮತ್ತು ‘ಸರ್ಪಟ್ಟ ಪರಂಬರೈ’ ನಂತಹ ಸಿನಿಮಾಗಳನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ಲಕ್ಷ್ಯ ಮಾಡಿರುವುದು ತೀವ್ರ ದುಃಖ ತಂದಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ನಟನೆ ಚೆನ್ನಾಗಿದೆ ಆದರೆ ಸರ್ಪಟ್ಟ (ಸ್ಟಂಟ್, ಕಲಾ ನಿರ್ದೇಶನ) ಜೈ ಭೀಮ್ (ಮಣಿಕಂಠನ್), ಮಾನಾಡು (ಪ್ರವೀಣ್ ಕೆಎಲ್), ಕರ್ಣನ್ (ಸಂತೋಷ್ ನಾರಾಯಣನ್) ಅವರ ಕೆಲಸಗಳನ್ನು ಪರಿಗಣಿಸದಿರುವುದು ನಂಬಲು ಸಾಧ್ಯವಿಲ್ಲ. ವಸಂತ್ ಅವರಂತಹ ದಿಗ್ಗಜ ತೀರ್ಪುಗಾರರು ಒಳಗೊಂಡ ಜ್ಯೂರಿಗಳಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಜ್ಯೂರಿಗಳ ಪ್ರಕಾರ ಪ್ರಕಾರ ʼಜೈ ಭೀಮ್ʼ, ʼಕರ್ಣನ್ʼ, ‘ಸರ್ಪಟ್ಟ ಪರಂಬರೈ’ ಸಿನಿಮಾಗಳಿಗಿಂತ ಸ್ಮಗ್ಲರ್ ಸಿನಿಮಾ ʼಪುಷ್ಪʼ ಉತ್ತಮವಾಗಿದೆ ಎಂದು ಒಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪ್ರಶಸ್ತಿ ಈಗ ಜೋಕ್ ಆಗಿದೆ! ಜೈ ಭೀಮ್, ಸರ್ಪಟ್ಟ’ಸರ್ಪಟ್ಟ ಪರಂಬರೈ’ ಮತ್ತು ಕರ್ಣನ್ ಸಿನಿಮಾಗಳುಗೆ ಯಾವುದೇ ಪ್ರಶಸ್ತಿಗಳಿಲ್ಲ !! ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ತಮಿಳು ಸಿನಿಮಾಗಳು ಮಾತ್ರವಲ್ಲದೆ ಮಲಯಾಳಂನಲ್ಲಿ ಸದ್ದು ಮಾಡಿದ’ಮಿನ್ನಲ್ ಮುರಳಿ’ ಮತ್ತು ‘ನಯಟ್ಟು’ ಸಿನಿಮಾಗಳಿಗೆ ಯಾವುದೇ ಪ್ರಶಸ್ತಿಗಳು ಲಭಿಸದೆ ಇರುವುದು ಸಿನಿ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ.