Advertisement
ಚಿತ್ರದ ತಯಾರಿಕೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಅವಹೇಳನ ಮಾಡುವ ಒಂದು ಸಣ್ಣ ಆಲೋಚನೆಯೂ ಇರಲಿಲ್ಲ ಎಂದು ಒತ್ತಿ ಹೇಳಿದ ಜ್ಞಾನವೇಲ್, “ಮನನೊಂದವರಿಗೆ ಮತ್ತು ದುಃಖಿತರಿಗೆ ನನ್ನ ಹೃತ್ಪೂರ್ವಕ ವಿಷಾದವನ್ನು ತಿಳಿಸುತ್ತೇನೆ” ಎಂದು ಹೇಳಿದರು.
Related Articles
Advertisement
ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ, ಸೂರ್ಯ ಅವರನ್ನು ಜವಾಬ್ದಾರಿಯನ್ನು ಹೊರುವಂತೆ ಕೇಳುವುದು ದುರದೃಷ್ಟಕರ. ನಿರ್ದೇಶಕನಾಗಿ, ಇದು ನನ್ನ ಮಾತ್ರ ಜವಾಬ್ದಾರಿ ಮಾತ್ರ, ನಾನು ತೆಗೆದುಕೊಳ್ಳಬೇಕಾದ ವಿಷಯ ಎಂದರು.
ನವೆಂಬರ್ 1 ರಂದು ತಮಿಳು ಮತ್ತು ತೆಲುಗು ಸೇರಿದಂತೆ ಭಾಷೆಗಳಲ್ಲಿ ಬಿಡುಗಡೆಯಾದ ‘ಜೈ ಭೀಮ್’ ನಲ್ಲಿ ತಮಿಳುನಾಡಿನ ವನ್ನಿಯಾರ್ ಸಂಗಮ್ ಸಮುದಾಯದ ಸದಸ್ಯರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಗಲಾಟೆಗೆ ಕಾರಣವಾಗಿತ್ತು, ಮಾತ್ರವಲ್ಲದೆ ಸೂರ್ಯ ಅವರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಚಿತ್ರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾದ ವನ್ನಿಯಾರ್ ಅಥವಾ ವನ್ನಿಯಾ ಕುಲ ಕ್ಷತ್ರಿಯರು ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಪ್ರಧಾನರಾಗಿದ್ದಾರೆ. ವನ್ನಿಯಾರ್ ಸಂಗಮ್‌ನ ಚಿಹ್ನೆಯು ಉರಿಯುತ್ತಿರುವ ಬೆಂಕಿಯ ಕುಂಡ ಆಗಿದೆ.