Advertisement

ಲಂಬೋದರನಿಗೆ ಜಗ್ಗೇಶ್‌ ಹಿನ್ನೆಲೆ ಧ್ವನಿ

11:43 AM Dec 20, 2018 | Team Udayavani |

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಟ್ರೆಂಡ್‌ ಶುರುವಾಗಿದೆ. ಅದೇನೆಂದರೆ ತಮ್ಮ ಸಿನಿಮಾಗಳ ಪಾತ್ರ ಪರಿಚಯವನ್ನು ಯಾರಾದರೊಬ್ಬರು ನಟರಿಂದ ಮಾಡಿಸೋದು. ಆ ನಟರ ಹಿನ್ನೆಲೆ ಧ್ವನಿಯಲ್ಲಿ ಪಾತ್ರ ಪರಿಚಯ, ನಿರೂಪಣೆ ಸಾಗುತ್ತದೆ.

Advertisement

ಈ ತರಹದ ಪ್ರಯೋಗ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಡೆದಿದೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಲಂಬೋದರ’. “ಲೂಸ್‌ಮಾದ’ ಯೋಗಿ ನಾಯಕರಾಗಿರುವ “ಲಂಬೋದರ’ ಚಿತ್ರಕ್ಕೆ ನಟ ಜಗ್ಗೇಶ್‌ ಹಿನ್ನೆಲೆ ಧ್ವನಿ ನೀಡಿದ್ದಾರೆ.  ಚಿತ್ರದಲ್ಲಿನ ಪಾತ್ರಗಳ ಪರಿಚಯ ಹಾಗೂ ಕಥೆಯಲ್ಲಿ ಬರುವ ಕೆಲವೊಂದು ಟ್ವಿಸ್ಟ್‌ಗಳು ಜಗ್ಗೇಶ್‌ ಧ್ವನಿಯಲ್ಲಿ ಮೂಡಿಬರಲಿದೆ. 

ಈ ಚಿತ್ರವನ್ನು ಕೃಷ್ಣರಾಜ್‌ ನಿರ್ದೇಶಿಸಿದ್ದಾರೆ. “ಲಂಬೋದರ’ ಸಿನಿಮಾಕ್ಕೆ “ಬಸವನಗುಡಿ, ಬೆಂಗಳೂರು’ ಎಂಬ ಟ್ಯಾಗ್‌ಲೈನ್‌ ಇದೆ. ಟ್ಯಾಗ್‌ಲೈನ್‌ಗೆ ತಕ್ಕಂತೆ ಕಥೆಯ ಬಹುಭಾಗ ಚಿತ್ರೀಕರಣ ಕೂಡಾ ಅಲ್ಲೇ ನಡೆದಿದೆ. ಚಿತ್ರದಲ್ಲಿ ಆಕಾಂಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ವಿಶ್ವೇಶ್ವರ್‌ ಪಿ ಹಾಗೂ ರಾಘವೇಂದ್ರ ಭಟ್‌ ನಿರ್ಮಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next