Advertisement

ಮಂಜನ ಕಾಮಿಡಿ ಮಾಂಜ

01:02 PM Feb 05, 2017 | Team Udayavani |

ಜಗ್ಗೇಶ್‌ ಅವರ ದೊಡ್ಡ ಅಭಿಮಾನಿಯಂತೆ ಚಿಪ್ಸ್‌ ಫ್ಯಾಕ್ಟರಿ ಮಾಲೀಕರಾದ ಕೃಷ್ಣ. ಜಗ್ಗೇಶ್‌ ಅಭಿನಯದ ಚಿತ್ರವೊಂದನ್ನು ನಿರ್ಮಿಸಬೇಕು ಎಂಬುದು ಕೃಷ್ಣ ಅವರ ಕನಸು. ಇದು ಗೊತ್ತಾಗಿದ್ದೇ ಒಂದಿಷ್ಟು ಜನ ಜಗ್ಗೇಶ್‌ ಅವರ ಚಿತ್ರ ಮಾಡಿಸಿಕೊಡುವುದಾಗಿ ನಂಬಿಸಿ, ಅವರಿಂದ ಒಂದಿಷ್ಟು ದುಡ್ಡು ಕಿತ್ತಿದ್ದಾರೆ. ಏನೇನೋ ಹೇಳಿ ಕೃಷ್ಣ ಅವರ ಸೈಟು ಮಾರಿಸಿ ದುಡ್ಡು ಖಾಲಿ ಮಾಡಿದ್ದಾರೆ. ಆಮೇಲೆ ನೋಡಿದರೆ, ದುಡ್ಡೂ  ಖಾಲಿ, ಚಿತ್ರವೂ ಶುರುವಾಗಲಿಲ್ಲ. ಕೊನೆಗೆ ಕೃಷ್ಣ ನೇರವಾಗಿ ಜಗ್ಗೇಶ್‌ ಬಳಿಗೆ ಹೋಗಿ
ತಮ್ಮ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಅವರಿಗಾದ ಅನ್ಯಾಯ ನೋಡಿದ ಜಗ್ಗೇಶ್‌, ತಾವೇ ಮುಂದೆ ಒಂದು ಸಿನಿಮಾ ಮಾಡಿಕೊಟ್ಟಿದ್ದಾರೆ. ಹೀಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ “ಮೇಲುಕೋಟೆ ಮಂಜ’, ಇದೀಗ ಬಿಡುಗಡೆಗೆ ನಿಂತಿದೆ.ಇದೇ ಫೆಬ್ರವರಿ 10ರಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಚಿತ್ರ ಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಜಗ್ಗೇಶ್‌ ಮತ್ತು ತಂಡದವರು ಚಿತ್ರದ ಬಗ್ಗೆ ಏನು ಹೇಳುತ್ತಾರೆ ಗೊತ್ತಾ ? 

Advertisement

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಜಗ್ಗೇಶ್‌ ಅಭಿನಯದ ಮತ್ತು ನಿರ್ದೇಶನದ “ಮೇಲುಕೋಟೆ ಮಂಜ’ ಚಿತ್ರ ಬಿಡುಗಡೆಯಾಗಿರಬೇಕಿತ್ತು. ಆದರೆ, ಚಿತ್ರ ಅನೇಕ ಕಾರಣಗಳಿಂದ ತಡವಾಯ್ತು. ಎಲ್ಲಾ ಸರಿ ಹೋಯಿತು ಎನ್ನುವಷ್ಟರಲ್ಲಿ, ಜಗ್ಗೇಶ್‌ ಅಭಿನಯದ “ನೀರ್‌ ದೋಸೆ’ ಬಿಡುಗಡೆಗೆ ಬಂದಿದೆ. ದೋಸೆಗಾಗಿ ಜಾಗ ಬಿಟ್ಟುಕೊಟ್ಟ ಚಿತ್ರತಂಡವು, ಈಗ ಕೊನೆಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಫೆಬ್ರವರಿ 10ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮಾಡೋಕೆ ನಿರ್ಮಾಪಕ ಕೃಷ್ಣ ಅವರೇ ಒಂದರ್ಥದಲ್ಲಿ ಸ್ಫೂರ್ತಿ ಎನ್ನುತ್ತಾರೆ ಜಗ್ಗೇಶ್‌.

ಏಕೆಂದರೆ, ಇದಕ್ಕೂ ಮುನ್ನ ಅವರು ಬೇರೆ ಕಥೆಯೊಂದನ್ನು ಮಾಡಬೇಕು ಎಂದುಕೊಂಡಿದ್ದರಂತೆ. ಅದರಲ್ಲೂ ಮರ್ಡರ್‌ ಮಿಸ್ಟ್ರಿ ಚಿತ್ರವೊಂದನ್ನು ಮಾಡಬೇಕು ಎಂದು ಜಗ್ಗೇಶ್‌ ಅವರ ಮನಸ್ಸಿನಲ್ಲಿತ್ತಂತೆ. ಆದರೆ, ಕೊನೆಗೆ ಅದು ಬದಲಾಗಿದೆ. ಅದಕ್ಕೆ ಕಾರಣ ನಿರ್ಮಾಪಕ ಕೃಷ್ಣ.

“ನನ್ನ ಚಿತ್ರ ಮಾಡಬೇಕು ಎಂದು ಕೃಷ್ಣ ಅವರಿಗೆ ಆಸೆ ಇತ್ತಂತೆ. ಆದರೆ, ಏನೇನೋ ಮೋಸವಾಗಿದೆ. ಕೊನೆಗೆ ಅವರಿಗೆ ಒಂದು ಚಿತ್ರ ಮಾಡಿಕೊಡಬೇಕಾಗಿ ಬಂದಾಗ, ಈ ಕಥೆ ಆಯ್ಕೆ ಮಾಡಿಕೊಂಡಿದ್ದೇವೆ. ಈ ಚಿತ್ರಕ್ಕೆ ಸ್ಫೂರ್ತಿ ಅವರೇ. ಎಲ್ಲಿಯವರೆಗೂ ಯಾಮಾರೋರು ಇರುತ್ತಾರೋ, ಯಾಮಾರಿಸುವವರೂ ಇರುತ್ತಾರೆ. ಅದೇ ಥೆÅಡ್‌ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಇಲ್ಲಿ ನಾಯಕ ಯಾವುದೋ ಕಾರಣಕ್ಕೆ ಮೋಸ ಹೋಗುತ್ತಾನೆ. ಕೊನೆಗೆ ತಾನು ಕೊಟ್ಟ ದುಡ್ಡು ವಾಪಸ್ಸು ಪಡೆಯುವುದಕ್ಕೆ ಏನೆಲ್ಲಾ ಮಾಡುತ್ತಾನೆ ಅನ್ನೋದೇ ಚಿತ್ರದ ಕಥೆ’ ಎನ್ನುತ್ತಾರೆ ಅವರು.

“ಮೇಲುಕೋಟೆ ಮಂಜ’ ಚಿತ್ರದಲ್ಲಿ ನಗುವಿಗೆ ಬರವಿಲ್ಲ ಎನ್ನುತ್ತಾರೆ ಜಗ್ಗೇಶ್‌. “ಇಲ್ಲಿ ನಗುವಿಗೆ ಕಾರಣ ಹುಡುಕಬೇಡಿ, ಲಾಜಿಕ್‌ ನೋಡಬೇಡಿ. ನನ್ನ ಹಿಂದಿನ ಚಿತ್ರಗಳನ್ನು ನೋಡಿ ತೀರ್ಮಾನಕ್ಕೆ ಬರಬೇಡಿ. ಸುಮ್ಮನೆ ನಗುವುದಕ್ಕೆ ಬನ್ನಿ. ಹಾಗೆ ಬಂದರೆ ಖಂಡಿತಾ ಚೆನ್ನಾಗಿ ನಗುತ್ತೀರಿ. ಇಲ್ಲಿ ನಗು, ಥ್ರಿಲ್‌, ಸೆಂಟಿಮೆಂಟ್‌ ಎಲ್ಲವನ್ನೂ ಹದವಾಗಿ ಮಿಕ್ಸ್‌ ಮಾಡಿ, ನೈಜತೆಗೆ ಹತ್ತಿರವಾದ ಚಿತ್ರವೊಂದನ್ನು ಮಾಡಿದ್ದೀನಿ. ಸಾಲ ಮಾಡುವ ಗುಣವಿರುವ ಮನುಷ್ಯ ಏನೇನು ಸಂಕಷ್ಟಗಳನ್ನು ಎದುರಿಸುತ್ತಾನೆ ಮತ್ತು ಅದರಿಂದ ಅವನ ತಂದೆ-ತಾಯಿ ಏನೆಲ್ಲಾ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು
ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇನೆ. ಮಂಜ ಎನ್ನುವ ಹೆಸರು ನನ್ನ ಉಸಿರಲ್ಲಿ ಬೆರೆತಿದೆ
ಅನಿಸುತ್ತೆ. ಇಲ್ಲಿ ನನ್ನದು ಎಲ್ಲರನ್ನೂ ಯಾಮಾರಿಸಿಕೊಂಡು ಓಡಾಡುವ ಪಾತ್ರ’ ಎನ್ನುತ್ತಾರೆ ಜಗ್ಗೇಶ್‌.

Advertisement

ಇಲ್ಲಿ ನಟನೆಗಿಂತ ನಿರ್ದೇಶಕರಾಗಿ ಹಲವು ಸವಾಲುಗಳನ್ನು ಎದುರಿಸಿದ್ದಾಗಿ ಹೇಳಿಕೊಳ್ಳುತ್ತಾರೆ ಜಗ್ಗೇಶ್‌. “ಇಲ್ಲಿ ಬಜೆಟ್‌ಗೆ ತಕ್ಕ ಹಾಗೆ ಮೇಕಿಂಗ್‌ ಮಾಡಿದ್ದೇವೆ. ಹಾಗಂತ ಏನೋ ಮಾಡಿದ್ದೀವಿ ಅಂತಲ್ಲ. ಪ್ರತಿ ದೃಶ್ಯವನ್ನೂ ನಾನು ಮತ್ತು ಆನಂದ್‌ ಮೊದಲೇ ಪಕ್ಕಾ ಪ್ಲಾನ್‌ ಮಾಡಿಕೊಂಡಿದ್ದೆವು. ಯಾವಾಗ ಏನು ಮತ್ತು ಎಷ್ಟು ಶೂಟ್‌ ಮಾಡಬೇಕು ಎಂದು ಮೊದಲೇ ಪೇಪರ್‌ ಮೇಲೆ ಇತ್ತು. ಚಿತ್ರದುದ್ದಕ್ಕೂ ಎರಡು ಕ್ಯಾಮೆರಾಗಳನ್ನು ಬಳಸಿ ಶೂಟ್‌ ಮಾಡಿದ್ದೀವಿ. ಸಾಮಾನ್ಯವಾಗಿ ಒಂದು ದೃಶ್ಯವನ್ನು ಪೂರ್ತಿಯಾಗಿ ಸೆರೆ ಹಿಡಿದು ,ಆ ನಂತರ ಮತ್ತೆ ಕಟ್‌ಶಾಟ್‌ಗಳಲ್ಲಿ ಎಮೋಷನ್‌ಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತೇವೆ. ಆದರೆ, ಒಬ್ಬ ಕಲಾವಿದ ಅದೇ ಮೂಡ್‌ನ‌ಲ್ಲಿ ಇರುವುದು ಕಷ್ಟ. ನಾನೊಬ್ಬ ಕಲಾವಿದನಾಗಿ ಕಲಾವಿದರ ಮೂಡ್‌ ಅಧ್ಯಯನ ಮಾಡಿದ್ದೀನಿ. ಮೂಡ್‌ ಕದಲದಂತೆ ಅಷ್ಟೂ ಎಮೋಷನ್‌ ಗಳನ್ನು ಸೆರೆಹಿಡಿಯುವುದು ಕಷ್ಟ. ಹಾಗಾಗಿ ಎರಡೆರೆಡು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿದ್ದೀವಿ. ಇದೆಲ್ಲಾ ಹಿರಿಯ ನಿರ್ದೇಶಕರಿಂದ ನಾನು ಕಲಿತ ಪಾಠ. ನಟರಿಗೂ ತೊಂದರೆಯಾಗಬಾರದು, ನಿರ್ಮಾಪಕರಿಗೂ ಹೆವಿಯಾಗದ ಹಾಗೆ ಚಿತ್ರ ಮಾಡುವುದೇ ಜಾಣ್ಮೆ ಮತ್ತು ಕಲೆ’ ಎಂಬುದು ಜಗ್ಗೇಶ್‌ ಅವರ ಅಭಿಪ್ರಾಯ. 

“ಮೇಲುಕೋಟೆ ಮಂಜ’ ಚಿತ್ರದಲ್ಲಿ ಜಗ್ಗೇಶ್‌ ಜೊತೆಗೆ ಐಂದ್ರಿತಾ ರೇ, ರಂಗಾಯಣ ರಘು, ಶ್ರೀನಿವಾಸ ಪ್ರಭು ಮುಂತಾದವರು ನಟಿಸಿದ್ದಾರೆ. ದಾಸರಿ ಸೀನು ಛಾಯಾಗ್ರಹಣ ಮಾಡಿದರೆ, ಗಿರಿಧರ್‌ ದಿವಾನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ ಬರೆದು, ಒಂದು ಹಾಡಿಗೂ ಸಾಹಿತ್ಯ ಬರೆದಿದ್ದಾರೆ ಜಗ್ಗೇಶ್‌.

ಹೆಸರಿಗೆ ತಕ್ಕಂತೆ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮೇಲುಕೋಟೆಯಲ್ಲಿ ಮಾಡಲಾಗಿದೆ. ಅದರ ಜೊತೆಗೆ ಬೆಂಗಳೂರು, ಮೈಸೂರುಗಳಲ್ಲೂ ಫೆ.10 ಚಿತ್ರೀಕರಣ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next