Advertisement

ಕಿಲಾಡಿ ಕುಟುಂಬಕ್ಕೆ ಜಗ್ಗೇಶ್‌ ಕ್ಯಾಪ್ಟನ್‌

12:38 PM Jun 09, 2017 | |

ಕಾಮಿಡಿ ಕಿಲಾಡಿಗಳು ಶೋನಲ್ಲಿ ಅಂತಿಮ ಹಂತಕ್ಕೆ ಬಂದಿದ್ದ 10 ಫೈನಲಿಸ್ಟ್‌ಗಳಲ್ಲದೆ, ಡ್ರಾಮಾ ಜ್ಯೂನಿಯರ್, ಲಿಟ್ಲ ಚಾಂಪಿಯನ್ಸ್‌, ಸರಿಗಮಪ ಹಾಗೂ ಜೀ ಕುಟುಂಬದ ಬಹುತೇಕ ಸದಸ್ಯರು, “ಕಿಲಾಡಿ ಕುಟುಂಬ’ದಲ್ಲಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇವರಿಗೆಲ್ಲ ಕ್ಯಾಪ್ಟನ್‌ ಬೇರಾರೂ ಅಲ್ಲ, ನಟ ಜಗ್ಗೇಶ್‌!

Advertisement

ನವರಸ ನಾಯಕ ಜಗ್ಗೇಶ್‌ ಈಗ ಕಿರುತೆರೆ ಪುನಃ ಹೊಸ ಅವತಾರದೊಂದಿಗೆ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್‌ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿ, ಅಂತಿಮ ಹಂತಕ್ಕೆ ಬಂದಿದ್ದ 10 ಜನ ಫೈನಲಿಸ್ಟ್‌ ಗಳು ಮತ್ತೂಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ಅಲ್ಲದೆ, ಇವರೊಂದಿಗೆ ವಿಶೇಷವಾಗಿ ಡ್ರಾಮಾ ಜ್ಯೂನಿಯರ್, ಲಿಟ್ಲ ಚಾಂಪಿಯನ್ಸ್‌, ಸರಿಗಮಪ ಹಾಗೂ ಜೀ ಕುಟುಂಬದ ಬಹುತೇಕ ಸದಸ್ಯರು ಈ ಕಿಲಾಡಿ ಕುಟುಂಬದಲ್ಲಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇವರಿಗೆಲ್ಲ ಕ್ಯಾಪ್ಟನ್‌ ಬೇರಾರೂ ಅಲ್ಲ, ನಟ ಜಗ್ಗೇಶ್‌! ಜೂನ್‌ 12ರ ಸೋಮವಾರದಿಂದ ಆರಂಭವಾಗಲಿರುವ ಈ ರಿಯಾಲಿಟಿ ಶೋ ಈವರೆಗೆ ಪ್ರಸಾರಗೊಂಡ ಕಾಮಿಡಿ ಕಾರ್ಯಕ್ರಮಗಳೆಲ್ಲವುಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ.

ವಿಶೇಷವಾಗಿ ನವರಸನಾಯಕ ಜಗ್ಗೇಶ್‌ ಅವರು ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದ ಜಗ್ಗೇಶ್‌ ಅವರು ಇಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಂತೆ ಇದು ಕೂಡ ಪ್ರೇಕ್ಷಕರನ್ನು ರಂಜಿಸಲೆಂದೇ ನಿರೂಪಿಸುತ್ತಿರುವ ಶೋ ಆಗಿದೆ. ಆದರೆ, ಈ ಬಾರಿ ವಿಶೇಷವಾಗಿ ಕಾಮಿಡಿಯ ಜೊತೆಗೆ ಎಲ್ಲಾ ಬಗೆಯ ನವರಸಗಳನ್ನು ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಶೋನಿಂದ ನಡೆಯುತ್ತಿದೆ.

ಎಂದಿನಂತೆ ನಾಡಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಎಲ್ಲಾ ತಯಾರಿಯೂ ನಡೆದಿದೆ. ಇದರ ಜೊತೆಗೆ, ದಿನದಿಂದ ದಿನಕ್ಕೆ ಮರೆಯಾಗುತ್ತಿರುವ ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಹುಡುಕಿ ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಹೊಸ ಪ್ರಯತ್ನವನ್ನು ಜೀ ವಾಹಿನಿ ತಂಡ ಕೈಗೆತ್ತಿಕೊಂಡಿದೆ.

Advertisement

ನವರಸ ನಾಯಕ ಜಗ್ಗೇಶ್‌ ಅವರೊಂದಿಗೆ ಕಾಮಿಡಿ ಕಿಲಾಡಿಗಳ ವಿಜೇತರಾದ ಶಿವರಾಜ್‌ ಕೆ.ಆರ್‌. ಪೇಟೆ ಹಾಗೂ ನಯನ ಕೂಡ ನಿರೂಪಣೆಯ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಜೂ.12ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7 ರಿಂದ 7.30ರ ವರೆಗೆ ಕಿಲಾಡಿ ಕುಟುಂಬ ಪ್ರಸಾರವಾಗಲಿದೆ. ಕಾಮಿಡಿ ಕಿಲಾಡಿಗಳು ವೀಕೆಂಡ್‌ನ‌ಲ್ಲಿ ಮಾತ್ರ ಪ್ರಸಾರವಾಗುತ್ತಿತ್ತು. ಆದರೆ, ಕಿಲಾಡಿ ಕುಟುಂಬ ವಾರದ 5 ದಿನವೂ ಪ್ರಸಾರವಾಗಲಿದೆ.  

Advertisement

Udayavani is now on Telegram. Click here to join our channel and stay updated with the latest news.

Next