Advertisement

ಅಮೇರಿಕಾದಲ್ಲಿ ಜಗ್ಗೇಶ್‌!

11:41 AM Apr 15, 2017 | Team Udayavani |

ಮಲ್ಲೇಶ್ವರಂನಿಂದ ಜಗ್ಗೇಶ್‌ ಕಾಣೆಯಾಗಿದ್ದಾರೆ. ಅವರು ಆ ಕಡೆ ಜಡೆಮಾಯಸಂದ್ರದಲ್ಲೂ ಇಲ್ಲ, ಈ ಕಡೆ ತುರವೇಕೆರೆಯಲ್ಲೂ ಇಲ್ಲ. ಹಾಗಿದ್ದರೆ ಅವರು ಎಲ್ಲಿ ಮಾಯವಾಗಿದ್ದರೆ ಎಂದು ಹುಡುಕಹೊರಟರೆ, ಅವರು ಸಿಗುವುದು ದೂರದ ಅಮೇರಿಕಾದಲ್ಲಿ. ಹೌದು, ಜಗ್ಗೇಶ್‌ ತಮ್ಮ ಪತ್ನಿ ಪರಿಮಳಾ ಮತ್ತು ಮಗ ಯತಿರಾಜ್‌ ಜೊತೆಗೆ ಅಮೇರಿಕಾಗೆ ಹಾರಿದ್ದಾರೆ.

Advertisement

ಅಲ್ಲಿ ಬಾಲ್ಯಸ್ನೇಹಿತರ ಭೇಟಿ ಹಾಗೂ ಕನ್ನಡತನದ ಬಗ್ಗೆ ನಾಲ್ಕು ರಾಜ್ಯಗಳಲ್ಲಿ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಅವರು ನಯಾಗರ ಫಾಲ್ಸ್‌, ಫಿಲೆಡಲ್ಫಿಯಾ ಮುಂತಾದ ಕಡೆ ಹೋಗಿದ್ದಾರೆ. ಏಪ್ರಿಲ್‌ 06ಕ್ಕೆ ಶುರುವಾದ ಈ ಪ್ರವಾಸ, ಏಪ್ರಿಲ್‌ 21ರವರೆಗೂ ಮುಂದುವರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next