Advertisement
ಯಾವುದೇ ಉಡುಪಿಗೆ ಹೊಂದಿಕೊಳ್ಳುವ ಮತ್ತು ಹೆಚ್ಚು ಕಂಫರ್ಟೆಬಲ್ ನೀಡುವ ಜಾಗರ್ ಪ್ಯಾಂಟ್ ಒಂದು ಹೊಸ ಟ್ರೆಂಡ್ ಆಗಿದೆ. ಜಾಗರ್ ಪ್ಯಾಂಟ್‌ನಲ್ಲೂ ಹಲವು ವಿಧಗಳಿದ್ದು, ಇದನ್ನು ಮದುವೆ ಸಮಾರಂಭಗಳಿಗೂ, ಕ್ಯಾಶುವಲ್ ಆಗಿಯೂ ಬಳಕೆ ಮಾಡಬಹುದು. ಸಾಮಾನ್ಯವಾಗಿ ಇದು ಹೆಚ್ಚು ಸ್ಟೈಲಿಶ್ ನೋಟ ನೀಡುತ್ತದೆ.
ಜಾಗರ್ ಪ್ಯಾಂಟ್ ಎಲ್ಲ ಉಡುಪಿಗೂ ಹೊಂದಿಕೊಳ್ಳತ್ತದೆ. ಆದರೆ ಕೆಲವೊಂದು ಶರ್ಟ್‌ಗೆ ಇದು ಹೆಚ್ಚು ಹೊಂದಿಕೊಳ್ಳುತ್ತದೆ. 1 ಟೀ ಶರ್ಟ್ ಮತ್ತು ಜಾಗರ್ ಪ್ಯಾಂಟ್
ಕ್ಯಾಶುವಲ್ ಆಗಿ ಬಳಕೆಯಾಗುವ ಜಾಗರ್ ಪ್ಯಾಂಟ್‌ಗೆ ಟೀ ಶರ್ಟ್ ಹೆಚ್ಚು ಹೊಂದಿಕೊಳ್ಳುತ್ತದೆ. ಸರಳವಾಗಿ ಆದರೆ ಹೆಚ್ಚು ಸ್ಟೈಲಿಶ್ ಕಾಣಿಸುತ್ತದೆ. ಕಾಲೇಜು ಹೋಗುವ ಯುವಕರಿಗೆ, ಕೆಲಸಕ್ಕೆ ಹೋಗುವ ಯುವಕರಿಗೆ ಕ್ಯಾಶ್ಯುವಲ್ ಉಡುಪುಗಳಾಗಿ ಇದು ಬಳಕೆಯಾಗುತ್ತದೆ.
Related Articles
ಸಾಮಾನ್ಯವಾಗಿ ಜಾಗರ್ ಪ್ಯಾಂಟ್‌ಗೆ ಕ್ರಾಕ್ಸ್ ಅಥವಾ ಲೋಫರ್ ಶೂ ಧರಿಸುವುದು ಟ್ರೆಂಡ್ ಆಗಿದೆ. ಜತೆಗೆ ಅದು ಹೆಚ್ಚು ಸ್ಟೈಲಿಶ್ ಲುಕ್ ನೀಡುತ್ತದೆ.
Advertisement
3 ಶರ್ಟ್, ಜಾಕೆಟ್‌ಗಳು ಜಾಗರ್‌ನೊಂದಿಗೆ ಹೊಂದಿಕೊಳ್ಳುತ್ತದೆ.ಡಾರ್ಕ್ ಬಣ್ಣದ ಶರ್ಟ್, ಟೀ ಶರ್ಟ್ ಮೇಲೆ ಜಾಕೆಟ್ ಕೂಡ ಜಾಗರ್ ಪ್ಯಾಂಟ್‌ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕಾಲೇಜು ಯುವಕರು ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕಲರ್‌ಗೆ ಮಹತ್ವ ನೀಡಿ
ಜಾಗರ್ ಪ್ಯಾಂಟ್ ಹಲವು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ನಮಗೆ ಹೊಂದಿಕೊಳ್ಳುವಂತಹ ಬಣ್ಣದ ಆಯ್ಕೆ ಮಾಡಿಕೊಂಡರೆ ಅದು ಹೆಚ್ಚು ಸೂಕ್ತವಾಗಿ ಕಾಣಿಸುತ್ತದೆ. ಜತೆಗೆ ಜಾಗರ್ ಪ್ಯಾಂಟ್‌ಗೆ ಸೂಕ್ತವಾಗುವಂತಹ ಶರ್ಟ್ ಅಥವಾ ಟೀ ಶರ್ಟ್ ಧರಿಸುವುದು ಹೆಚ್ಚು ಸೂಕ್ತ. ಕಂದು, ಬಳಿ, ಕಪ್ಪು ಬಣ್ಣಗಳಲ್ಲಿ ಹೆಚ್ಚಾಗಿ ಬರುವ ಜಾಗರ್ ಪ್ಯಾಂಟ್‌ಗಳಿಗೆ ವಿರುದ್ಧವಾದ ಡಾರ್ಕ್ ಬಣ್ಣಗಳ ಶರ್ಟ್‌ಗಳನ್ನು ಹಾಕುವುದರಿಂದ ಹೆಚ್ಚು ಸುಂದರವಾಗಿ ಕಾಣುತ್ತದೆ. ಜಾಗರ್‌ನ ವಿಧಗಳು
ಜಾಗರ್ ಪ್ಯಾಂಟ್ ಟ್ರೆಂಡ್ ಆಗುತ್ತಿದ್ದಂತೆ ಅದರಲ್ಲೂ ಹಲವು ವಿಧಗಳ ಪ್ಯಾಂಟ್‌ಗಳು ಮಾರ್ಕೆಟ್‌ಗೆ ಬಂದಿದೆ.
1 ಟ್ವಿಲ್ ಜಾಗರ್
ಟ್ವಿಲ್ ಜಾಗರ್‌ನಲ್ಲಿ ಪ್ಯಾಂಟ್‌ನ ಎರಡು ಬದಿಗಳಲ್ಲಿ ದೊಡ್ಡ ಪಾಕೆಟ್ ಮಾದರಿಯಲ್ಲಿದ್ದು, ಇದು ಹೆಚ್ಚು ಸ್ಟೈಲಿಶ್ ನೋಟ ನೀಡುತ್ತದೆ.
2 ಹಿಪ್ ಹಾಪ್ ಜಾಗರ್
3 ವೂಲ್ ಜಾಗರ್ - ರಂಜಿನಿ ಮಿತ್ತಡ್ಕ