ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿದರು.
ಕಿರೆಸೂರು, ಹೆಬಸೂರು, ಮೊರಬ, ಕಣ್ಣೂರು, ಯಮನೂರು,ಬೆಣ್ಣಿಹಳ್ಳ, ತುಪ್ಪರಿ ಹಳ್ಳ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ 24 ಸಾವಿರ ಪರಿಹಾರ ನೀಡಲು ಸರಕಾರ ನಿರ್ಧಾರಿಸಿದೆ. ಕೇಂದ್ರದ ಪರಿಹಾರ ಜೊತೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಲಿದೆ ಎಂದರು.
ಆಗಸ್ಟ್ ನಲ್ಲಿ ಸುರಿದ ಮಳೆಗಿಂತಲೂ ಹೆಚ್ಚಿನ ಹಾನಿ ಈಗ ಸಂಭವಿಸಿದೆ. ಮುಂಗಾರು ಹಿಂಗಾರು ಎರಡು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಮಳೆ ನಿಂತ ಬಳಿಕ ಪರಿಹಾರ ಕಾರ್ಯ ಆರಂಭವಾಗಲಿದೆ.
ಬೆಳೆ ವಿಮೆ ಜೊತೆ ಪರಿಹಾರ ವಿತರಣೆ ಮಾಡಲಾಗುವುದು.ನವಲಗುಂದ ತಾಲೂಕಿಗೆ 149 ಕೋಟಿ ಪರಿಹಾರ ,64 ಕೋಟಿ ಮುಂಗಾರು ಬೆಳೆ ಹಾನಿ ವಿಮೆ, ಹಿಂಗಾರು 69 ಕೋಟಿ, ಕಿಸಾನ್ ಸಮ್ಮಾನ್ ಯೋಜನೆ 54 ಕೋಟಿ ಬಿಡುಗಡೆ ಮಾಡಲಾಗಿದೆ.
ತಕ್ಷಣದಿಂದಲೇ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು.ಬೆಣ್ಣಿಹಳ್ಳದ ಪ್ರವಾಹ ತಪ್ಪಿಸಲು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಡಿಪಿಆರ್ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.