Advertisement
ಸಿಇಸಿಗೆ ಪೂರ್ವಭಾವಿಯಾಗಿ ನಡೆಯುವ ಪ್ರಮುಖರ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮಂಗಳವಾರ ದಿಲ್ಲಿಗೆ ತೆರಳಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರ ಪ್ರಮುಖರ ಜತೆಗೆ ಚರ್ಚೆ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ ದಿಲ್ಲಿಯಲ್ಲಿ ಬಿಡಾರ ಹೂಡಿ ಟಿಕೆಟ್ ವಿಷಯದಲ್ಲಿ ವರಿಷ್ಠರ ಜತೆಗೆ ಸಮಾಲೋಚನೆಗೆ ಅಪೇಕ್ಷಿಸು ತ್ತಿದ್ದ ಜಗದೀಶ್ ಶೆಟ್ಟರ್, ಸುಮಲತಾ ಅಂಬರೀಶ್ ರಾಜ್ಯದತ್ತ ಮುಖ ಮಾಡಿದ್ದಾರೆ.
ವನ್ನು ಕಂಡು ಮಾಜಿ ಸಿಎಂ ಜಗದೀಶ್ ಶೆಟ್ಟರ್ ದಿಗಿಲುಗೊಂಡಿದ್ದಾರೆ. ಒಂದು ಕಡೆ ಸ್ಥಳೀಯ ನಾಯಕರ ವಿರೋಧ, ಇನ್ನೊಂದೆಡೆ ಪಂಚಮಸಾಲಿ ವಿವಾ ದದ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಶೆಟ್ಟರ್ ಹಿಂದಡಿ ಇರಿಸುತ್ತಿದ್ದು, ದಿಲ್ಲಿಗೆ ತೆರಳಿ ವರಿಷ್ಠರಿಗೆ ಈ ವಿಚಾರವನ್ನು ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ಇತ್ತ ಬೆಳಗಾವಿಯ ನಿಯೋಗ ಬೆಂಗಳೂರಿಗೆ ಬಂದು ಚುನಾವಣ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಶೆಟ್ಟರ್ ಅವರನ್ನು ಬೆಳಗಾವಿ ಯಿಂದಲೇ ಕಣಕ್ಕಿಳಿಸುವುದಕ್ಕೆ ಯಡಿಯೂರಪ್ಪ ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಸುಧಾಕರ್‌ಗೆ ಅದೃಷ್ಟ?ಹೀಗಾಗಿ ಚಿತ್ರದುರ್ಗ, ರಾಯಚೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರು ಮಾತ್ರ ಅಂತಿಮಗೊಳ್ಳಬಹುದು. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಯಾರೂ ಉತ್ಸಾಹ ತೋರದೆ ಇರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಮಾಜಿ ಸಚಿವ ಡಾ| ಸುಧಾಕರ್ ಹೆಸರನ್ನು ವರಿಷ್ಠರು ಅಂತಿಮಗೊಳಿಸಬಹುದು ಎನ್ನಲಾಗುತ್ತಿದೆ. ಶೆಟ್ಟರ್‌ಗೆ ಟಿಕೆಟ್ ನೀಡಬೇಡಿ: ಸ್ಥಳೀಯ ನಾಯಕರ ಮನವಿ
ಬೆಳಗಾವಿ: ಬೆಳಗಾವಿ ಅಭ್ಯರ್ಥಿಯ ಆಯ್ಕೆ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿರುವಂತೆಯೇ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ನಾಯಕರು ಮಂಗಳವಾರ ಬೆಂಗಳೂರಿಗೆ ತೆರಳಿ ಪಕ್ಷದ ರಾಜ್ಯ ನಾಯಕರ ಜತೆ ಅಭ್ಯರ್ಥಿ ಆಯ್ಕೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್
ಸ್ಪರ್ಧೆಗೆ ವಿರೋಧ ಆರಂಭವಾಗಿದೆ. ಯಾವ ಕುರಿಯನ್ನು ಎಲ್ಲಿ ನಿಲ್ಲಿಸಿ ಬಲಿ ಕೊಡಬೇಕೆಂಬ ಬಗ್ಗೆ ಬಿಜೆಪಿಯು ಶಿಸ್ತುಬದ್ಧವಾಗಿ ಯೋಜನೆ ರೂಪಿಸು ತ್ತಿದೆ. ಟಿಕೆಟ್ ಕೊಟ್ಟಂತೆ ಆಗಬೇಕು, ಸಂಸತ್ತಿಗೆ ಬರಬಾರದೆಂಬುದೇ ಅವರ ಯೋಜನೆ. ಇದು ಶೆಟ್ಟರ್ ಅವರಿಗೂ ಗೊತ್ತಿದೆ. ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ ಸಂದೇಶ ಕೊಡುವ ಬದಲು ಸ್ಪರ್ಧಿಸಬಹುದು, ಏಕಾಏಕಿ ಸೋಲಲೂಬಹುದು.
-ಲಕ್ಷ್ಮಣ ಸವದಿ