Advertisement

AP: ನಾಳೆ ಜಗನ್‌ ಸಹೋದರಿ ಶರ್ಮಿಳಾ ಕಾಂಗ್ರೆಸ್‌ ಸೇರ್ಪಡೆ; ಪಕ್ಷವೂ ವಿಲೀನ

12:18 AM Jan 03, 2024 | Team Udayavani |

ಹೈದರಾಬಾದ್‌: ಆಂಧ್ರಪ್ರದೇಶ ಸಿಎಂ ವೈ.ಎಸ್‌.ಜಗನ್ಮೋಹನ ರೆಡ್ಡಿ ಅವರ ಸಹೋದರಿ ವೈ.ಎಸ್‌.ಶರ್ಮಿಳಾ ಅವರು ಕಾಂಗ್ರೆಸ್‌ ಸೇರುವುದು ನಿಶ್ಚಿತವಾಗಿದೆ. ಜತೆಗೆ ಅವರು ತೆಲಂಗಾಣದಲ್ಲಿ ಸ್ಥಾಪಿಸಿದ ಯುವಜನ, ಶ್ರಮಿಕ, ರೈತು ತೆಲಂಗಾಣ ಪಕ್ಷ (ವೈಎಸ್‌ಆರ್‌ಟಿಪಿ)ವನ್ನು ಕಾಂಗ್ರೆಸ್‌ ಜತೆ ವಿಲೀನಗೊಳಿಸುವುದಾಗಿಯೂ ಘೋಷಿಸಿದ್ದಾರೆ. ಗುರುವಾರ ಹೊಸದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಶರ್ಮಿಳಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ, ತಮ್ಮ ಪಕ್ಷವನ್ನು ವಿಲೀನಗೊಳಿಸಲಿದ್ದಾರೆ.

Advertisement

ಅನಂತರ ಅವರಿಗೆ ಯಾವ ರೀತಿಯ ಪ್ರಾಧಾನ್ಯತೆ ಮತ್ತು ಹುದ್ದೆ ಲಭಿಸಲಿದೆ ಎಂಬ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ, ಆಂಧ್ರದಲ್ಲಿ ತಮ್ಮ ತಂದೆ ದಿ| ವೈ.ಎಸ್‌.ರಾಜಶೇಖರ ರೆಡ್ಡಿಯ ಅವಧಿಯಲ್ಲಿದ್ದಂತೆ, ಪಕ್ಷವನ್ನು ಬಲಪಡಿಸುವ ಹೊಣೆಯನ್ನು ಶರ್ಮಿಳಾರಿಗೆ ವಹಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next