ಜಗಳೂರು: ಚಿಕ್ಕ ಮಲ್ಲನಹೊಳೆ ಗ್ರಾಮದ ರೈತರು ಮತ್ತು ಗ್ರಾಮಸ್ಥರು ಶುಕ್ರವಾರ ಕೋಲಾಟ ಆಡುವ ಮೂಲಕ ಹಾಗೂ ಮತ್ತು ತಮಟೆ ಬಡಿಯುವ ಮೂಲಕ ವಿನೂತನವಾಗಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಹೋರಾಟಕ್ಕೆ ಬೆಂಬಲ ಸೂಚಿಸಿ, 26ನೇ ದಿನದ ಧರಣಿಯಲ್ಲಿ ಪಾಲ್ಗೊಂಡರು.
ಚಿಕ್ಕ ಮಲ್ಲನಹೊಳೆ ಗ್ರಾಮಸ್ಥರು ಪಟ್ಟಣದ ಪ್ರವಾಸಿ ಮಂದಿರದಿಂದ ಕೋಲಾಟವಾಡುತ್ತ, ತಮಟೆ ಬಡಿಯುತ್ತ ಪ್ರತಿಭಟನಾ ಸ್ಥಳವಾದ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.
ಈ ವೇಳೆ ರೈತ ಮುಖಂಡ ಲಕ್ಷಣ್ ಮಾತನಾಡಿ, ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮ ತಾಲೂಕಿಗೆ ಮುಂಜೂರಾಗಿರುವ ನೀರು ನಮಗೆ ದೊರೆಯಬೇಕು ಮತ್ತು ಬೆಳಘಟ್ಟ ಮಾರ್ಗದ ಮೂಲಕವೇ ಶಾಸಖಾ ನಾಲೆ ಬರಬೇಕು. ಈ ಮಾರ್ಗದಿಂದ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ಮಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ನಮ್ಮ ತಾಲೂಕನ್ನು ಅಭಿವೃದ್ಧಿಪಡಿಸಬೇಕು ಎಂಬ ಆಸಕ್ತಿ ಯಾವ ಜನಪ್ರತಿನಿಧಿಗಳಿಗೂ ಇಲ್ಲ. ಇನ್ನು ಬರುವ ಯೋಜನೆಗಳನ್ನು ತಡೆಯುವಂತಹ ಹುನ್ನಾರ ನಡೆಯುತ್ತಿದೆ. ನಮಗೆ ನ್ಯಾಯ ದೊರೆಯುವ ತನಕ ನಾವು ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಲಿಂಗರಾಜ್, ಓಬಳೇಶ್, ಗಡಿಮಾಕುಂಟೆ ಬಸವರಾಜಪ್ಪ, ಜಯದೇವಪ್ಪ, ಬಾಲರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.