Advertisement

ಸೋಂಕು ಹೆಚ್ಚಳ ಆತಂಕಕಾರಿ: ತಹಶೀಲ್ದಾರ್‌

01:26 PM May 03, 2020 | Naveen |

ಜಗಳೂರು: ತಾಲೂಕಿನಿಂದ ಯಾರೂ ದಾವಣಗೆರೆಗೆ ತೆರಳುವಂತಿಲ್ಲ ಮತ್ತು ಅಲ್ಲಿಂದ ಇಲ್ಲಿಗೆ ಯಾರೂ ಬಾರದಂತೆ ಪ್ರತಿಯೊಬ್ಬರೂ ನಿಗಾ ವಹಿಸಬೇಕಾಗಿದೆ ಎಂದು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಯಾವುದೇ ಸೋಂಕು ಇರಲಿಲ್ಲ. ಹಾಗಾಗಿ ಸರ್ಕಾರ ಹಸಿರು ಝೋನ್‌ಗೆ ಸೇರ್ಪಡೆಗೊಳಿಸಿತು. ಆದರೆ ಕಳೆದ 3 ದಿನಗಳಿಂದ ದಾವಣಗೆರೆಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು,ಇದು ಆತಂಕ ಕಾರಿ ಬೆಳವಣಿಗೆಯಾಗಿದೆ ಅದ್ದರಿಂದ ಯಾರು ಕೂಡ ತಾಲೂಕು ಬಿಟ್ಟು ಬೇರೆ ಕಡೆ ತೆರಳಬಾರದು ಮತ್ತು ರಸ್ತೆಯಲ್ಲಿ ಉಗಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ರಾಜು ಬಣಕಾರ್‌ ಮಾತನಾಡಿ, ಪಟ್ಟಣದ ಗುರುಭವನದ ಮುಂಭಾಗದಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಹಾವಳಿ ಹಿನ್ನಲೆಯಲ್ಲಿ ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಾತ್ರ ವ್ಯಾಪಾರ ನಡೆಸಬೇಕು. ಉಲ್ಲಂಘಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಅಂತರಕ್ಕೆ ಒತ್ತು ನೀಡಿ ಸ್ಯಾನಿಟೈಸರ್‌, ಮಾಸ್ಕ್ ಬಳಕೆ ಮಾಡಬೇಕು ಎಂದರು. ಸಭೆಯಲ್ಲಿ ಪೊಲೀಸ್‌ ವೃತ್ತನಿರೀಕ್ಷಕ ಡಿ. ದುರುಗಪ್ಪ, ಪಪಂ ಆರೋಗ್ಯ ನಿರೀಕ್ಷಕ ಖೀಫಾಯತ್‌, ಕಂದಾಯ ನಿರೀಕ್ಷಕ ಸಂತೋಷ್‌ಕುಮಾರ್‌ ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next