Advertisement

ಮಹಿಳೆಯರು ಸೌಲಭ್ಯ ಪಡೆಯಲು ಮಾಹಿತಿ ಅರಿತುಕೊಳ್ಳಿ

01:34 PM May 01, 2019 | Team Udayavani |

ಜಗಳೂರು: ಮಹಿಳೆಯರಿಗೆ ಹಲವಾರು ಸೌಲಭ್ಯಗಳಿದ್ದು, ಮಾಹಿತಿ ಕೊರತೆಯಿಂದ ಅವರಿಗೆ ದೊರೆಯುತ್ತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬದಾಸ್‌ ಜಿ. ಕುಲಕರ್ಣಿ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಪಂ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳೆ ಮತ್ತು ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನಲ್ಲಿ ಎಷ್ಟೇ ಅವಕಾಶಗಳು ಹಾಗೂ ನ್ಯಾಯಯುತ ಸೇವೆಗಳು ಇದ್ದರೂ ಸಹ ಗ್ರಾಮೀಣ ಭಾಗದ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಇಲ್ಲದೇ ಇರುವುದರಿಂದ ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಎಲ್ಲಿಯವರೆಗೆ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಹೋರಾಟ ನಡೆಸುದಿಲ್ಲವೊ ಅಲ್ಲಿಯವರೆಗೆ ಹಕ್ಕುಗಳು ದೊರೆಯುವುದಿಲ್ಲ ಎಂದರು.

2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ನಾಗಶ್ರೀ ಮಾತನಾಡಿ, ಸಮಾಜದಲ್ಲಿ ಮಹಿಳೆಗೆ ಮೊದಲು ಗೌರವ ನೀಡಲಾಗುತಿತ್ತು. ಹೆಣ್ಣನ್ನು ಲಕ್ಷಿ ್ಮೕಗೆ ಹೋಲಿಕೆ ಮಾಡಲಾಗುತ್ತಿತ್ತು. ಆನಾದಿ ಕಾಲದಿಂದಲು ಮಹಿಳೆಗೆ ದೇವರ ಸ್ಥಾನ ಕೊಡಲಾಗಿದೆ. ಯಾವುದೇ ಪುರುಷ ಪ್ರಧಾನ ದೇವಸ್ಥಾನಗಳಲ್ಲಿ ಮಹಿಳಾ ದೇವತೆಗಳಿಗೆ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಜನನಕ್ಕೆ ಒತ್ತು ನೀಡುತ್ತಿರಲಿಲ್ಲ. ವಿಜ್ಞಾನವನ್ನು ಉತ್ತಮ ಕೆಲಸಕ್ಕೆ ಬಳಸದೆ ಭ್ರೂಣ ಪತ್ತೆ ಮಾಡಿ, ಭ್ರೂಣ ತೆಗೆಯುವಂತ ಕೆಲಸ ಮಾಡಲಾಗುತ್ತಿತ್ತು . ಇದನ್ನು ನಿಯಂತ್ರಿಸಲು ಭ್ರೂಣ ಹತ್ಯೆ ಕಾನೂನನ್ನು ಜಾರಿಗೆ ತರಲಾಯಿತು ಎಂದರು.

Advertisement

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಇವುಗಳನ್ನು ಹತೋಟಿಗೆ ತರಲು ಕಠಿಣ ಕಾನೂನುಗಳು ಜಾರಿಯಲ್ಲಿವೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಹೋರಾಟ ಮಾಡಬೇಕಾಗಿದೆ. ಆದ್ದರಿಂದ ಮಹಿಳೆಯರು ಶಿಕ್ಷಣವಂತರಾಗಬೇಕು. ಮ್ಕಕಳ ಮೇಲೆ ಪೋಷಕರು ನಿಗಾ ಇಡಬೇಕು. ಸಮಾಜದಲ್ಲಿ ಮಕ್ಕಳು ದಾರಿ ತಪ್ಪಲು ಮೊಬೈಲ್ ಪ್ರಮುಖ ಕಾರಣವಾಗುತಿದೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ ಮೇಲುಗಲ್ ಮಾತನಾಡಿ, ಪ್ರತಿಯೊಂದು ಕುಟುಂಬದಲ್ಲಿಯೂ ಮಹಿಳೆಯರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. 2005ರ ನಂತರ ಆಸ್ತಿಹಕ್ಕು ಕಾಯ್ದೆಯ ಪ್ರಕಾರ ತಂದೆ ಜೀವಂತ ಇದ್ದಾಗ ಆಸ್ತಿಯಲ್ಲಿ ಹೆಣ್ಣು, ಗಂಡು ಸಮಾನ ಹಕ್ಕನ್ನು ಹೊಂದಿರುತ್ತಾರೆ. ಕುಟುಂಬಗಳಲ್ಲಿ ವೈಮನಸ್ಸುಗಳು ಹೆಚ್ಚಾದಾಗ ಆಸ್ತಿಯ ಪಾಲುಗಳು ಹೆಚ್ಚಾಗಲಿವೆ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪಿ.ಜೆ. ಸೋಮಶೇಖರ್‌, ಜೆಎಂಎಫ್‌ಸಿ ನ್ಯಾಯಾಧೀಶರಾದ ಮಹೇಂದ್ರ, ಸಹಾಯಕ ಸರ್ಕಾರಿ ಅಭಿಯೋಜಕಿ ಎಂ. ರೂಪಾ, ಸಿಡಿಪಿಒ ಭಾರತಿ ಬಣಕಾರ್‌, ಡಿವೈಎಸ್‌ಪಿ ಸೋಮಲಿಂಗ ಕುಂಬಾರ, ವಕೀಲರ ಸಂಘದ ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next