Advertisement

ಮಧ್ಯಾಹ್ನವೇ ಗ್ರಾಮ ಪಂಚಾಯತ್‌ ಕಚೇರಿ ಬಂದ್‌: ಜನರ ಆಕ್ರೋಶ

01:14 PM May 16, 2019 | Team Udayavani |

ಜಗಳೂರು: ತಾಲೂಕಿನ ಗುರುಸಿದ್ದಪುರ ಗ್ರಾಮ ಪಂಚಾಯಿತಿಯವರು ಮಧ್ಯಾಹ್ನದ ವೇಳೆಗೇ ಕಚೇರಿಯ ಬಾಗಿಲು ಮುಚ್ಚುತ್ತಾರೆ. ಕಳೆದ 4 ತಿಂಗಳಿಂದ ಪಿಡಿಒ ಮುಖ ಸಹ ನಾವು ನೋಡಿಲ್ಲ ಎಂದು ಗ್ರಾಮದ ರೈತ ಸಂಘದ ಮುಖಂಡ ತಿಪ್ಪೇಸ್ವಾಮಿ ದೂರಿದ್ದಾರೆ.

Advertisement

ಗ್ರಾಮಸ್ಥರು ಉದ್ಯೋಗ ಖಾತರಿ, ಕಂದಾಯ ಪಾವತಿ, ಖಾತೆ ಬದಲಾವಣೆ ಸೇರಿದಂತೆ ಇತರೆ ಕೆಲಸಕ್ಕೆ ಬಂದರೆ ಒಬ್ಬ ಸಿಬ್ಬಂದಿ ಸಹ ಕರ್ಚಇಯಲ್ಲಿ ಸಿಗುವುದಿಲ್ಲ. ಇದರಿಂದಾಗಿ ನಮ್ಮ ಕೆಲಸಗಳು ಹಾಗೆಯೇ ಉಳಿಯುತ್ತವೆ. ಗ್ರಾಮದಲ್ಲಿರುವ ಸಮಸ್ಯೆ ಬಗ್ಗೆ ಕೇಳಿದರೆ ಸಿಬ್ಬಂದಿಗಳು ಪಿಡಿಒರತ್ತ ಬೊಟ್ಟು ತೋರಿಸುತ್ತಾರೆ. ಪಿಡಿಒ ನೋಡಿದರೆ ಗ್ರಾಮ ಪಂಚಾಯಿತಿಗೆ ಸರಿಯಾಗಿ ಬಾರುವುದಿಲ್ಲ, ಜನರ ಕೈಗೆ ಸಿಗುವುದಿಲ್ಲ. ದೂರವಾಣಿ ಕೆರೆ ಮಾಡಿದರೂ ಸಹ ಸಿಗುವುದಿಲ್ಲ. ಇವರ ಕೆಲಸ ಕಾರ್ಯಗಳೆಲ್ಲ ದಾವಣಗೆರೆಯಲ್ಲಿಯೇ ನಡೆಯುತ್ತದೆ ಎಂಬುವುದು ಹೊಸ ಕ್ಯಾಂಪ್‌ ಗ್ರಾಮಸ್ಥರ ಆರೋಪವಾಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಜನರ ಸಮಸ್ಯೆ ಪರಿಹರಿಸಬೇಕಾದವರೇ ಕಚೇರಿಗೆ ಬಾರದಿದ್ದರೆ ನಾವು ಯಾರನ್ನು ಕೇಳಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಕಚೇರಿಯಲ್ಲಿ ಸಿಬ್ಬಂದಿ ಇರದಿರುವ ಕುರಿತು ವಿಚಾರಿಸಿದಾಗ ಸಿಬ್ಬಂದಿಗಳು ಸದರಿ ಗ್ರಾಮದಲ್ಲಿ ತೆರೆಯಲಾಗಿರುವ ಗೋಶಾಲೆಗೆ ನೀರು ಒದಗಿಸುವ ಕೆಲಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಜಾನಕಿರಾಮ್‌, ತಾಪಂ ಇಒ, ಜಗಳೂರು.

ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಸಿಬ್ಬಂದಿಗಳು ಸರಕಾರ ನಿಗದಿಪಡಿಸಿದ ಸಮಯದವರೆಗೂ ಇರಬೇಕು. ಈ ಘಟನೆ ಕುರಿತು ಪರಿಶೀಲನೆ ನಡೆಸಲಾಗುವುದು.
.ಜಾನಕಿರಾಮ್‌,
ತಾಪಂ ಇಒ, ಜಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next