Advertisement

ಅಲೆಮಾರಿಗಳ ಸಮಸ್ಯೆಗೆ ಸ್ಪಂದಿಸಲು ಕರೆ

04:29 PM Apr 13, 2020 | Naveen |

ಜಗಳೂರು: ಕೋವಿಡ್ ವೈರಸ್‌ ಬಡವ ಶ್ರೀಮಂತನೆಂದು ನೋಡದೆ ಎಲ್ಲರಿಗೂ ಹರಡುತ್ತಿದೆ. ಆದ್ದರಿಂದ ಸ್ವಚ್ಛತೆಗೆ ಮತ್ತು ಮುಂಜಾಗ್ರತ ಕ್ರಮಕ್ಕೆ ಆದ್ಯತೆ ನೀಡಬೇಕು ಎಂದು ಜೆಎಂಎಫ್‌ ಸಿ ನ್ಯಾಯಾಧೀಶರಾದ ತಿಮ್ಮಯ್ಯ ಅಲೆಮಾರಿ ಸಮಾಜದವರಿಗೆ ಸಲಹೆ ನೀಡಿದರು.

Advertisement

ಪಟ್ಟದ ಅಶ್ವಥ್‌ ರೆಡ್ಡಿ ನಗರದ ಸಮೀಪ ಸುಮಾರು ವರ್ಷಗಳಿಂದ ಬಿದರಕೆರೆ ರಸ್ತೆಯ ಪಕ್ಕದ ಖಾಸಗಿ ಜಮೀನೊಂದರಲ್ಲಿ ಬಟ್ಟೆ ಗುಡಿಸಲಲ್ಲಿ ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯವಿರುವ ಸ್ಥಳಕ್ಕೆ ಭೇಟಿ ನೀಡಿ ಕೋವಿಡ್ ವೈರಸ್‌ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಊಟದ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ಇಲ್ಲ. ಸ್ವಾಮಿ ತಹಶೀಲ್ದಾರ್‌ ಅವರು ನೀಡಿದ್ದಾರೆ. ಆದರೆ ನಮಗೆ ಸೂರಿನ ವ್ಯವಸ್ಥೆ ಬೇಕು ಎಂದು ಮನವಿ ಮಾಡಿದರು. ಇವರಿಗೆ ನಿವೇಶನದ ವ್ಯವಸ್ಥೆ ಮಾಡಿ ಕೊಡಿ ಎಂದು ತಹಶೀಲ್ದಾರ್‌ಗೆ ಸೂಚಿಸಿದಾಗ 1 ಎಕರೆ ಜಮೀನು ಇವರಿಗೆ ಮಂಜೂರಾಗಿತ್ತು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಕೋವಿಡ್ ಮುಗಿದ ತಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯ ಮೇಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆರೋಗ್ಯಾಧಿಕಾರಿ ನಾಗರಾಜ್‌, ಧನಂಜಯ್‌, ನವೀನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next