Advertisement

ಫುಟ್‌ಪಾತ್‌ ಮೇಲೆ ಅಂಗಡಿ-ಪಾದಚಾರಿಗಳಿಗೆ ತೊಂದರೆ

11:36 AM Nov 29, 2019 | Naveen |

ರವಿಕುಮಾರ ಜೆ.ಓ. ತಾಳಿಕೆರೆ
ಜಗಳೂರು:
ಪಟ್ಟಣದಲ್ಲಿ ಪರವಾನಗಿ ಪಡೆಯದೇ ಅನಧಿಕೃತವಾಗಿ ಗೂಡಂಗಡಿಗಳು ದಿನದಿಂದ ದಿನಕ್ಕೆ ಅಣಬೆಯಂತೆ ತಲೆ ಎತ್ತುತ್ತಿದ್ದರೂ ಸಹ ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಪ್ರಾರಂಭವಾಗುವ ಗೂಡಂಗಡಿಗಳು ಬಿದರಕೆರೆ ರಸ್ತೆಯವರೆಗೆ ತಲೆ ಎತ್ತುತ್ತಲೇ ಇವೆ. ಬೆಸ್ಕಾಂ ಕಚೇರಿ, ತೋಟಗಾರಿಕೆ ಇಲಾಖೆ , ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ತಾಲೂಕು ಕಚೇರಿ , ಕೃಷಿ ಇಲಾಖೆ ಮುಂಭಾಗದವರೆಗೂ ಗೂಡಂಗಡಿಗಳ ಅಬ್ಬರ ಜೋರಾಗಿದೆ. ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಮೀಪ, ಭುವನೇಶ್ವರಿ ವೃತ್ತ, ಚಳ್ಳಕೆರೆ ರಸ್ತೆ, ದಾವಣಗೆರೆ ರಸ್ತೆ, ಹಳೆ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ ಸೇರಿದಂತೆ ಬಹುತೇಕ ಜನನಿಬಿಡ ಪ್ರದೇಶಗಳಲ್ಲಿ ಸಮಾರು 150 ರಿಂದ 200 ಅನ ಧಿಕೃತವಾಗಿ ಗೂಡಿಂಗಡಿಗಳು ಪಟ್ಟಣ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ಮಾಡಿಕೊಂಡಿವೆ.

Advertisement

ಜನತೆಗೆ ತೊಂದರೆ: ಸಾರ್ವಜನಿಕರು ಓಡಾಡುವ ಸಲುವಾಗಿ ಪಟ್ಟಣ ಪಂಚಾಯಿತಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಫುಟ್‌ಪಾತ್‌ ನಿರ್ಮಿಸಲಾಗಿದೆ. ಆದರೆ ಈ ಫುಟ್‌ ಪಾತ್‌ಮೇಲೆ ಈಗ ಗೂಡಂಗಡಿಗಳು ಬಂದಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿರುವುದಲ್ಲದೇ ರಸ್ತೆಯಲ್ಲಿ ಜನ ನಡೆದಾಡುವಂತಾಗಿ ಕೆಲವು ಸಲ ಅಪಾಘಾತಗಳು ಸಹ ಆದ ಉದಾಹರಣೆಗಳಿವೆ.

ಆದಾಯವೂ ಇಲ್ಲ: ಈ ಎಲ್ಲಾ ಗೂಡಂಗಡಿಗಳು ಅನಧಿಕೃತವಾಗಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಆದಾಯ ಕೂಡ ಇಲ್ಲ. ತಾಲೂಕು ಕಚೇರಿ ಮುಂಭಾಗದಲ್ಲಿ ಸುಮಾರು 20 ರಿಂದ 30 ಗೂಡಂಗಡಿಗಳಿದ್ದು, ಇವುಗಳ ಮೇಲೆ ಹೈ ಟೆನÒನ್‌ ವಿದ್ಯುತ್‌ ವೈರ್‌ ಹಾದುಹೋಗಿದೆ. ಆಕಸ್ಮಿಕವಾಗಿ ಗಾಳಿ, ಮಳೆಗೆ ವೈರು ತುಂಡಾಗಿ ಬಿದ್ದರೆ ಈ ಅಂಗಡಿಗಳು ಸುಟ್ಟು ಕರಕಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಬೆಸ್ಕಾಂ ಸಿಬ್ಬಂದಿ.

ಪಟ್ಟಣದಲ್ಲಿರುವ ಅನಧಿಕೃತ ಗೂಡಂಗಡಿಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರಾಜು ಬಣಕಾರ್‌,
ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ.

ಅನಧಿಕೃತ ಅಂಗಡಿಗಳಿಂದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಸದರಿ ಸ್ಥಳದಲ್ಲಿ ಇಲಾಖೆ ವತಿಯಿಂದ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿದರೆ ಸಾಕಷ್ಟು ಹಣ ಇಲಾಖೆಗೆ ಹರಿದು ಬರಲಿದೆ.
.ಮಹಾಲಿಂಗಪ್ಪ. ಎಸ್‌.ಎಫ್‌.ಐ ಜಿಲ್ಲಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next