Advertisement

ಸಂಪೂರ್ಣ ನೀರಾವರಿಗೆ ಚಿಂತನೆ

11:24 AM Feb 23, 2020 | Naveen |

ಜಗಳೂರು: ತಾಲೂಕಿನ 58 ಕೆರೆಗಳಿಗೆ ನೀರು ತುಂಬಿಸುವುದರೊಂದಿಗೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಜಾರಿಯಾಗಲಿದ್ದು, ಇನ್ನೆರಡು ವರ್ಷಗಳಲ್ಲಿ ತಾಲೂಕನ್ನು ಸಂಪೂರ್ಣವಾಗಿ ನೀರಾವರಿಯನ್ನಾಗಿ ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.

Advertisement

ಲೋಕೋಪಯೋಗಿ ಇಲಾಖೆಯ 5054 ಯೋಜನೆಯಡಿ ತಾಲೂಕಿನ ಕೊಣಚಗಲ್‌ ಗುಡ್ಡದ ಸಮೀಪದ ದೇವಸ್ಥಾನಕ್ಕೆ ತೆರಳಲು 1 ಕೋಟಿ 60 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ಹಾಲೇಹಳ್ಳಿ ಗ್ರಾಮಕ್ಕೆ 1ಕೋಟಿ 70 ಲಕ್ಷ ರೂ. ವೆಚ್ಚದಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಮತ್ತು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕ ಅರಕೆರೆ ಸಾಗಲಗಟ್ಟೆ ರಸ್ತೆ ಅಭಿವೃದ್ಧಿ ಹಾಗೂ 1
ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಪಲ್ಲಾ ಗಟ್ಟೆಯಿಂದ ಧರ್ಮಪುರ ರಸ್ತೆ ಅಭಿವೃದ್ಧಿ ಮತ್ತು ಭೂಸೇನೆ ನಿಗಮದ ವತಿಯಿಂದ 3 ಕೋಟಿ 60 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 8 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ. ಕೆಲವು ಭಾಗದಲ್ಲಿ ಜನ ಎಷ್ಟೇ ಅನುದಾನ ಹಾಕದರೂ ಕೂಡ ಇನ್ನು ಅನುದಾನ ಕೇಳುತ್ತಾರೆ ಕಾರಣ ನಾವು ಕೆಲಸ ಮಾಡುತ್ತೇವೆ ಎಂದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಮತ್ತು ಗ್ರಾಮಸ್ಥರು ಕೂಡ ಗುಣಮಟ್ಟದ ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು. ತಾಲೂಕು ಬರ ನಾಡಾಗಿದ್ದು ಸಿರಿಗೆರೆ ಶ್ರೀಗಳ
ಆಶೀರ್ವಾದದಿಂದ 750 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 58 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿಗಳು ಕರೆಸಲಾಗುವುದು. ಈಗ ಅಧಿವೇಶನ ಇರುವುದರಿಂದ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು. 1200 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ ತಾಲೂಕಿನ 45 ಸಾವಿರ ಎಕರೆ ನೀರಾವರಿಯಾಗಲಿದ್ದು, ಮುಂದಿನ ದಿನಗಳಲ್ಲಿ ತಾಲೂಕನ್ನು ಸಂಪೂರ್ಣವಾಗಿ ನೀರಾವರಿಯನ್ನಾಗಿ ಮಾಡಲಾಗುವುದು ಎಂದರು.

ಶಾಸಕ ಎಸ್‌.ವಿ.ರಾಮಚಂದ್ರ ಮಾತನಾಡಿ, 58 ಕೆರೆಗಳಿಗೆ ನೀರಾವರಿ ಶೀಘ್ರದಲ್ಲೇ ಜಾರಿಯಾಗಲಿದ್ದು, ಭದ್ರಾ ಮೆಲ್ದಂಡೆ ನೀರಾವರಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ 15 ಸಾವಿರ ಎಕರೆ ನೀರಾವರಿ ಪ್ರದೇಶವಿತ್ತು. ಅದನ್ನು ಈಗ 45 ಸಾವಿರ ಎಕರೆಗೆ ವಿಸ್ತರಿಸಲಾಗಿದ್ದು, ಹನಿ ನೀರಾವರಿ ಪದ್ಧತಿಯ ಮೂಲಕ ನೀರು ದೊರೆಯಲಿದೆ. ಈ ಹಿಂದೆ ಕೊಣಚಗಲ್‌ ಗುಡ್ಡದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದೇನೆ ಎಂದು ಹೇಳಿದರು.

ತಾಲೂಕು ಬಿಜಿಪಿ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್‌, ಮಾಜಿ ಅಧ್ಯಕ್ಷ ಡಿ.ವಿ.ನಾಗಪ್ಪ, ತಾಪಂ ಸದಸ್ಯೆ ಚೌಡಮ್ಮ ಶಿವಣ್ಣ, ಮುಖಂಡರಾದ ಅಮರೇಂದ್ರಪ್ಪ, ರಾಘುರಾಮ್‌ ರೆಡ್ಡಿ, ಬಿಸ್ತುವಳ್ಳಿ ಬಾಬು, ರವಿಕುಮಾರ್‌,ಶಿವಣ್ಣ, ಚಟ್ನಳ್ಳಿ ರಾಜಣ್ಣ, ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next