Advertisement

ಮಕ್ಕಳಲ್ಲಿ ಕನಸು ಬಿತ್ತಿದ ಅಧಿಕಾರಿಗಳು!

11:58 AM Jan 31, 2020 | Team Udayavani |

ಜಗಳೂರು: ದೇಶದಲ್ಲಿ ಉನ್ನತ ಸ್ಥಾನದಲ್ಲಿರುವಂತ ಶೇ. 90 ಅಧಿಕಾರಿಗಳು ಮಾತೃಭಾಷೆ ಮಾಧ್ಯಮ ಮತ್ತು ಸರಕಾರಿ ಶಾಲೆಗಳಲ್ಲಿ ಕಲಿತವರೇ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಹೇಳಿದರು .

Advertisement

ತಾಲೂಕಿನ ಹೊಸಕೆರೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳಲಾಗಿದ್ದ “ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ” ಮತ್ತು ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಬಡತನದಿಂದಾಗಿ ಎಷ್ಟೋ ರಾತ್ರಿ ಊಟವಿಲ್ಲದೆ ನೀರು ಕುಡಿದು, ಅವರಿವರು ಕೊಟ್ಟ ಬಟ್ಟೆ ಧರಿಸಿ ಜೀವನ ಸಾಗಿಸಿದ್ದೇನೆ. ಈ ಕಷ್ಟದ ಜೀವನದಲ್ಲೂ ನಾನು ಕೆಂಪು ಗೂಟದ ಕಾರಿನಲ್ಲಿ ಓಡಾಡಬೇಕು ಎಂದು ಕನಸನ್ನು ಕಂಡು ಅದನ್ನು ನೆರವೇರಿಸಿಕೊಂಡಿದ್ದೇನೆ. ನೀವೂ ನಮ್ಮಂತಾಗುವ ಕನಸನ್ನು ಕಾಣಬೇಕೆಂಬ ಉದ್ದೇಶದಿಂದ ತಾಲೂಕಿನ ಈ ಗ್ರಾಮದ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನೂ ನನ್ನೊಂದಿಗೆ ಕರೆತಂದಿದ್ದೇನೆ. ಕನಸು ಕಣಲಿಕ್ಕೆ ಅಂತಸ್ತಿನ ವ್ಯತ್ಯಾಸವಿರುವುದಿಲ್ಲ. ಸಾಧಿಸುವ ಛಲದ ಜೊತೆಗೆ ನಿರ್ದಿಷ್ಟ ಗುರಿ, ಅದಕ್ಕೆ ತಕ್ಕ ಶ್ರಮ ಹಾಕಿದಾಗ ಯಶಸ್ಸು ಕಾಣಲಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯತಿ ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ಪ್ರಾಣಿ ಮತ್ತು ಮನುಷ್ಯನಿಗೆ ವ್ಯತ್ಯಾಸವಿದೆ. ಮನುಷ್ಯನಿಗೆ ಯೋಚನೆ ಶಕ್ತಿ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಕಂಡ ಕನಸನ್ನು ಯಶಸ್ವಿಗೊಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಪಿಡಿ ನಜ್ಮಾ ಮಾತನಾಡಿ, ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿರಬೇಕು. ಆಗ ಮಾತ್ರ ನಮ್ಮ ಕನಸನ್ನು ನಾವು ಈಡೇರಿಸಿಕೊಳ್ಳಲು ಸಾಧ್ಯ. ನನಗೆ ಓದಲು ಆಸಕ್ತಿ ಇರಲಿಲ್ಲ. ವಿವಾಹದ ನಂತರ ನನ್ನ ಅತ್ತೆ, ಮಾವ, ಕುಟುಂಬದವರ ಒತ್ತಡದಿಂದ ಪದವಿ ಪಡೆದು ನಂತರ ಪ್ರೌಢಶಾಲಾ ಶಿಕ್ಷಕಿಯಾದೆ. ನಂತರ ಉನ್ನತ ಅ ಧಿಕಾರಿಗಳನ್ನು ಕಂಡು ನಾನು ಕೂಡ ಅಂತಹ ಸ್ಥಾನಕ್ಕೆ ಬರಬೇಕೆಂಧು ಕಷ್ಟು ಪಟ್ಟು ಓದಿ ಈ ಸ್ಥಾನದಲ್ಲಿದ್ದೇನೆ ಎಂದು ತಮ್ಮ ಯಶಸ್ಸಿನ ಗುಟ್ಟನ್ನ ಮಕ್ಕಳಿಗೆ ತಿಳಿಸಿದರು.

Advertisement

ವಿಶೇಷ ಭೂಸ್ವಾ ಧೀನಾಧಿ ಕಾರಿ ರೇಷ್ಮ ಹಾನಗಲ್‌ ಮಾತನಾಡಿ, ಮುಸ್ಲಿಂ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದಿಲ್ಲ. ಅದರಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಓದಲಿಕ್ಕೆ ಅವಕಾಶವಿರಲಿಲ್ಲ. ನಮ್ಮ ತಂದೆ ಅವರ ಸಹೋದರರ ವಿರೋಧದ ನಡುವೆಯೂ ನನ್ನನ್ನು ಶಾಲೆಗೆ ಸೇರಿಸಿದ್ದರಿಂದ ನಾನು ಈ ಹಂತ ತಲುಪಿದ್ದೇನೆ ಎಂದು ಹೇಳಿದರು.

ಎ.ಸಿ. ಮಮತ ಹೊಸಗೌಡ್ರು ಮಾತನಾಡಿ, ನಾನು ವಿಜ್ಞಾನ ವಿಷಯದಲ್ಲಿ ಉತ್ತಮಅಂಕ ಪಡೆದು ಇಂಜಿನಿಯರಿಂಗ್‌ ಸೀಟ್‌ ದೊರೆತರೂ ಅದು ಸಾಧ್ಯವಾಗಲಿಲ್ಲ. ಡಿಇಡಿ ಪದವಿ ಪಡೆದು ಶಿಕ್ಷಕಿಯಾಗಿದೆ. ನಂತರ ವಿವಾಹವಾಗಿ ಎರಡು ಮಕ್ಕಳ ತಾಯಿಯಾದ ನಂತರ ಸತತ ಪರಿಶ್ರಮದಿಂದ ಕೆಎಎಸ್‌ ಪಾಸ್‌ ಆಗಿ ಎ ಸಿ ಆಗಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next