Advertisement

ಸಂಘಪರಿವಾರದ ಹೆಸರು ಹೇಳದಿದ್ದರೆ ಸಿದ್ದರಾಮಯ್ಯ-ಡಿಕೆಶಿ ಗೆ ತಿಂದಿದ್ದು ಜೀರ್ಣವಾಗದು: ಶೆಟ್ಟರ್

03:52 PM Apr 11, 2022 | Team Udayavani |

ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಡಿ.ಕೆ. ಶಿವಕುಮಾರ್ ಗೆ ಸಂಘ ಪರಿವಾರದ ಹೆಸರು ಹೇಳದಿದ್ದರೆ, ಅವರಿಗೆ ತಿಂದದ್ದು ಜೀರ್ಣ ಆಗುವುದಿಲ್ಲ ಎಂದೆನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಾಗ್ದಾಳಿ ನಡೆಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ-ದೇಶದಲ್ಲಿನ ಎಲ್ಲ ಸಮಸ್ಯೆಗಳಿಗೂ ಸಂಘ ಪರಿವಾರವನ್ನೇ ಗುರಿ ಮಾಡುತ್ತಾರೆ. ಪದೇ ಪದೇ ಸಂಘ ಪರಿವಾರದ ಹೆಸರು ಹೇಳುವುದು ಅವರಿಗೆ ಖಯಾಲಿಯಾಗಿಬಿಟ್ಟಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರದ ಬಗ್ಗೆಯಾಗಲಿ ಅಥವಾ ಮುಖ್ಯಮಂತ್ರಿಗಳ ಬಗ್ಗೆಯಾಗಲಿ ಏನಾದರೂ ಮಾತನಾಡುವುದಿದ್ದರೆ ಮಾತನಾಡಲಿ. ಅದನ್ನು ಬಿಟ್ಟು ಸಂಘ ಪರಿವಾರದ ವಿರುದ್ಧ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ. ವಿರೋಧ ಪಕ್ಷದ ವೈಫಲ್ಯತೆ ಮುಚ್ಚಿಕೊಳ್ಳಲು ಇವತ್ತು ಸಂಘದ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ:ಇಂದೇ ಉಸ್ತುವಾರಿ ಬದಲಾಯಿಸಿ, ನನಗೇನು ಅಭ್ಯಂತರವಿಲ್ಲ: ಶಾಸಕರ ವಿರುದ್ಧ ಗರಂ ಆದ ಬಿ.ಸಿ.ಪಾಟೀಲ

ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿ ತೆರವು ವೇಳೆ ದಾಂಧಲೆ ವಿಚಾರವಾಗಿ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಎರಡೂ ಕಡೆಯವರು ಸಂಯಮದಿಂದ ಇದ್ದರೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ. ಕಲ್ಲಂಗಡಿ ಹಣ್ಣು ಎಸೆದಾಗ ವ್ಯಾಪಾರಿಯ ಪರ ಮಾತನಾಡುವವರು ಶಿವಮೊಗ್ಗದ ಹರ್ಷನ ಕೊಲೆ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಕೇವಲ ಒಂದು ಸಮಾಜದ, ಒಂದು ಸಮುದಾಯದ ತಪ್ಪನ್ನೇ ಎತ್ತಿ ತೋರಿಸುವುದು ಸರಿಯಲ್ಲ. ಈ ಪದ್ಧತಿ ಅಳಿದರೆ ಮಾತ್ರ ಸೌಹಾರ್ದತೆ ವಾತಾವರಣ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ನಿಲ್ಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next