Advertisement

ಪದವೀಧರ ಚುನಾವಣೆ ಗಂಭೀರ ಪರಿಗಣಿಸಿ

01:38 PM Oct 18, 2020 | Suhan S |

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ನಿರ್ವಹಿಸುವಂತೆ ಪಕ್ಷದ ಮುಖಂಡರಿಗೆ ಸಚಿವ ಜಗದೀಶ ಶೆಟ್ಟರ ಕರೆ ನೀಡಿದರು.

Advertisement

ಮಹಾ ನಗರ ಪಾಲಿಕೆ ಬಿಜೆಪಿ ಮಾಜಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಹು-ಧಾ ಮಹಾನಗರ ಚುನಾವಣಾ ನಿರ್ವಹಣಾ ಸಮಿತಿ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದು ಇನ್ನು ಕೆಲವೇ ದಿನಗಳು ಮತದಾನಕ್ಕೆ ಬಾಕಿ ಇದ್ದು ಕಾರ್ಯಕರ್ತರು ಪ್ರತಿ ಮನೆ-ಮನೆಗೆ ತೆರಳಿ ಪದವೀಧರ ಮತದಾರರನ್ನು ಭೇಟಿ ಮಾಡಿ ಮತದಾರರ ಮನವೊಲಿಸುವಂತೆ ಹೇಳಿದರು.

ಪ್ರೊ|ಎಸ್‌.ವಿ.ಸಂಕನೂರ ವಿಧಾನ ಪರಿಷತ್‌ ಸದಸ್ಯರಾಗಿ 6 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ತಿಳಿಸಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಮಾಡಿದ ಸಾಧನೆ ಮತದಾರರಿಗೆಳಿಸಿ ಸಂಕನೂರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದರು. ಕಳೆದ ಚುನಾವಣೆಯಲ್ಲಿ ಪ್ರಜ್ಞಾವಂತ ಪದವೀಧರರಿಂದ ಮಾಡಿದ ಮತದಾನ ದಲ್ಲಿ ಸುಮಾರು 4 ಸಾವಿರ ಮತಗಳು ತಿರಸ್ಕೃತಗೊಂಡಿದ್ದು ಆಘಾತಕಾರಿ. ಈ ಚುನಾವಣೆಯಲ್ಲಿ ಈ ರೀತಿ ಆಗಬಾರದು ಎಂದು ಶೆಟ್ಟರ ಕಾರ್ಯಕರ್ತರಿಗೆ ಕರೆ ನೀಡಿದರು.  ಈ ಬಾರಿ 75 ಸಾವಿರಕ್ಕೂ ಅಧಿಕ ಮತದಾರರಿದ್ದು, ಅವಳಿನಗರದಲ್ಲಿ ಹೆಚ್ಚು ಮತಗಳಿವೆ. ಕಾರ್ಯಕರ್ತರು ಕೋವಿಡ್ ಮಹಾಮಾರಿ ಇರುವುದರಿಂದ ಜನರನ್ನು ಮತಗಟ್ಟೆಗೆ ಕರೆ ತಂದು ಮತ ಚಲಾವಣೆ ಪ್ರತಿಯೊಬ್ಬ  ಬೂತ್‌ ಪ್ರಮುಖರು ಹಾಗೂ ಘಟ ನಾಯಕರು ವ್ಯವಸ್ಥೆ ಮಾಡಬೇಕು ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಜವಾಬ್ದಾರಿ ವಹಿಸಿಕೊಂಡ ಎಲ್ಲ ಪದಾಧಿಕಾರಿ ಕಾರ್ಯಕರ್ತರು ನಾಳೆಯಿಂದ ಮನೆ-ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಬೇಕು ಎಂದು ಹೇಳಿದರು. ಬಿಜೆಪಿ ಮುಖಂಡರಾದ ಪ್ರದೀಪ ಶೆಟ್ಟರ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಮಹಾನಗರ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಗರಗ, ರವಿ ನಾಯಕ, ಡಾ|ಪಾಂಡುರಂಗ ಪಾಟೀಲ, ಶಿವು ಹಿರೇಮಠ, ಪೂರ್ಣಾ ಪಾಟೀಲ, ರಾಧಾಬಾಯಿ ಸಫಾರೆ, ವಿರೇಶ ಅಂಚಟಗೇರಿ, ಸಂಜಯ ಕಪಟಕರ, ಸುನೀಲ ಮೋರೆ, ಮೇನಕಾ ಹುರಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next