Advertisement

ಜಡ್ಕಲ್‌-ಮುದೂರು: ಭಾರೀ ಗಾಳಿ ಮಳೆಗೆ ಮನೆ ಕುಸಿತ

10:05 PM Aug 19, 2019 | Sriram |

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ರವಿವಾರ ಸುರಿದ ಗಾಳಿ ಮಳೆಗೆ ಮನೆಗಳು ಕುಸಿದು ಲಕ್ಷಾಂತರ ರೂ.ನಷ್ಟವಾಗಿದೆ.

Advertisement

ಮುದೂರಿನ ತಪ್ಸೆ ಗುಡ್ಡೆ ರಾಮಣ್ಣ ಶೆಟ್ಟಿಯವರ ಮನೆಯ ಸಮೀಪದ ಗುಡ್ಡ ಜರಿತದಿಂದಾಗಿ ಮನೆಯು ಕುಸಿದು ಬಿದ್ದು ಲಕ್ಷಾಂತರ ರೂ.ನಷ್ಟವಾಗಿದೆ.

ಜಡ್ಕಲ್‌ ಗ್ರಾಮದ ಸಿಕ್ಸಾಲ್‌ ಎಂಬಲ್ಲಿನ ನಿವಾಸಿ ಶ್ರೀಮತಿ ಭೋವಿ ಅವರ ಮನೆಯು ಕುಸಿದುಬಿದ್ದು ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ, ತಾ.ಪಂ. ಸದಸ್ಯೆ ಗ್ರೀಷ್ಮಾ ಭಿಡೆ, ಗ್ರಾ.ಪಂ. ಸದಸ್ಯರು, ಪಿಡಿಒ ಪುಷ್ಪಲತಾ, ಗ್ರಾಮ ಲೆಕ್ಕಿಗ ವಿರೇಶ್‌ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next